ಹಾಸ್ಟೆಲ್​ ವಿದ್ಯಾರ್ಥಿಗಳು ಮಾಮೂಲು ಕೊಡಲಿಲ್ಲ ಎಂದು ವಾರ್ಡನ್ ಹಿಂಗಾ ಮಾಡೋದು..!

ದೇವದುರ್ಗ: ಹಾಸ್ಟೆಲ್​ ದಾಖಲಾತಿಗೆ ವಿದ್ಯಾರ್ಥಿಗಳು ಹಣ ನೀಡಲಿಲ್ಲ ಎಂದು ವಿದ್ಯಾರ್ಥಿಗಳ ಮೇಲೆ ಬಿಸಿಎಂ ಹಾಸ್ಟೆಲ್​ ವಾರ್ಡನ್​​ ಹಲ್ಲೆ ನಡೆಸಿರುವ ಆರೋಪ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ಕೇಳಿಬಂದಿದೆ.
ಜಾಲಹಳ್ಳಿಯ ಬಿಸಿಎಂ ವಾರ್ಡನ್​​​ ಗೊಲ್ಲಾಳಪ್ಪ ಪೂಜಾರಿ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹಾಸ್ಟೆಲ್​​ನ ವಾರ್ಡನ್​​ ವಿದ್ಯಾರ್ಥಿಗಳಿಗೆ ಹಾಸ್ಟೆಲ್​ ದಾಖಲಾತಿ ಮಾಡಿಕೊಳ್ಳುವ ವೇಳೆ ₹ 2ರಿಂದ 3 ಸಾವಿರ ಕೇಳಿದ್ದಾರೆ. ಆದರೆ ವಿದ್ಯಾರ್ಥಿಗಳು ಹಣ ನೀಡದಿದ್ದಾಗ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಸ್ಥಳಕ್ಕೆ ಬಿಸಿಎಂ ತಾಲೂಕು ಅಧಿಕಾರಿ ಯಂಕಂಚಿ ಭೇಟಿ ನೀಡಿದ್ದಾರೆ. ಎಸ್​​ಎಫ್​ಐ ಸಂಘಟನೆ ನೇತೃತ್ವದಲ್ಲಿ ಹಲ್ಲೆ ಮಾಡಿರುವ ವಾರ್ಡನ್​​ ವಿರುದ್ಧ ಕ್ರಮ ಕೈಗೊಳ್ಳವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv