ಮತ್ತೆ ಝಳಪಿಸಿದ ಲಾಂಗು-ಮಚ್ಚುಗಳು, ಸಾರ್ವಜನಿಕರಲ್ಲಿ ಆತಂಕ

ಹೊಸಕೋಟೆ:  ಸಿಲಿಕಾನ್ ಸಿಟಿಯಲ್ಲಿ ಲಾಂಗು ಮಚ್ಚುಗಳಿಂದ ಎರಡು ಬೇಕರಿಗಳ ಮೇಲೆ ಹಲ್ಲೆ ನಡೆಸಿ ಹಣ ದೋಚಿದ ಘಟನೆ ನಡೆದಿದೆ. ಬೆಂಗಳೂರು ಹೊರವಲಯದ ಹೊಸಕೋಟೆ ಬಳಿಯ  ಕೆ.ಮಲ್ಲಸಂದ್ರದಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಬಂದ ಪುಂಡರ ಗ್ಯಾಂಗ್ ಎರಡು ಬೇಕರಿ ಧ್ವಂಸ ಮಾಡಿ, ₹25 ಸಾವಿರ ಹಣ ದೋಚಿ ಪರಾರಿಯಾಗಿದೆ. ಇನ್ನು ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ರಾಜಧಾನಿಯಲ್ಲಿ ಪುಂಡರ ಅಟ್ಟಹಾಸ

ಹೊಸಕೋಟೆಯಲ್ಲಿ ಲಾಂಗು ಮಚ್ಚುಗಳಿಂದ ಎರಡು ಬೇಕರಿಗಳ ಮೇಲೆ ಹಲ್ಲೆ – ಕಾರಿನಲ್ಲಿ ಬಂದು ಎರಡು ಬೇಕರಿ ಧ್ವಂಸ ಮಾಡಿ ₹25 ಸಾವಿರ ನಗದು ದೋಚಿದ ದುಷ್ಕರ್ಮಿಗಳು – ಬೆಂಗಳೂರು ಹೊರವಲಯದ ಹೊಸಕೋಟೆ ಬಳಿಯ ಕೆ.ಮಲ್ಲಸಂದ್ರದಲ್ಲಿ ಘಟನೆ #Bengaluru #Rowdy #Money #Hosakote #Bakery #Siliconcity

Posted by First News Kannada on Wednesday, February 7, 2018

Leave a Reply

Your email address will not be published. Required fields are marked *