ಹಾರ್ಮೋನ್​ ಏರಿಳಿತದಿಂದ ಉಂಟಾಗುವ ಮೊಡವೆಗಳ ನಿವಾರಣೆಗೆ ಹೀಗೆ ಮಾಡಿ

ಹಾರ್ಮೋನ್​ಗಳಲ್ಲಿ ಏರಿಳಿತ ಉಂಟಾದಾಗ ನಮ್ಮ ದೇಹದಲ್ಲೂ ಹಲವಾರು ಬದಲಾವಣೆಗಳು ಕಂಡು ಬರುತ್ತದೆ. ಅವುಗಳಲ್ಲಿ ಮೊಡವೆ ಕೂಡಾ ಒಂದು. ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ಹೆಚ್ಚಾಗಿ ಹಾರ್ಮೋನುಗಳ ಏರಿಳಿತ ಉಂಟಾಗುತ್ತದೆ. ಆದರೆ ಮೊಡವೆ ಎಲ್ಲಾ ವಯಸ್ಸಿನ ವಯಸ್ಕರ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಮುಟ್ಟಿನ ಸಮಸ್ಯೆ ಕಾಣಿಸಿಕೊಂಡ್ರೆ ಪುರುಷರಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಪ್ರೌಢಾವಸ್ಥೆಯ ಸಮಯದಲ್ಲಿ, ಹಾರ್ಮೋನ್ ಮೊಡವೆ ಚೀಕ್ಸ್​, ಮೂಗು ಮತ್ತು ಹಣೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಅವು ಸಾಮಾನ್ಯವಾಗಿ ಮುಖದ ಕೆಳ ಭಾಗದಲ್ಲಿ ಕಾಣಿಸುತ್ತವೆ, ಅವುಗಳೆಂದರೆ ಚೀಕ್ಸ್ ಕೆಳಗೆ ಕಾಣಿಸಿಕೊಳ್ಳುತ್ತದೆ.ಇನ್ನು ಕೆಲವರಲ್ಲಿ ತಲೆ, ಸಿಸ್ಟ್​, ಸಣ್ಣ ಪಿಂಪಲ್ಸ್​ಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಹಾರ್ಮೋನುಗಳ ಮೊಡವೆಗಾಗಿ ಮನೆಯ ಪರಿಹಾರಗಳು
1. ಟೀ ಟ್ರೀ ಆಯಿಲ್: ಟೀ ಟ್ರೀ ಎಣ್ಣೆ ಹಾರ್ಮೋನಿನ ಮೊಡವೆ ಉಂಟಾಗುವ ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಅದಕ್ಕಾಗೇ ಟೀ ಟ್ರಿ ಆಯಿಲ್ ಅನ್ನ ಹಲವಾರು ಚರ್ಮ ರಕ್ಷಣೆಯ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ. ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಅಥವಾ ಜೊಜೊಬಾ ಎಣ್ಣೆಗಳ ಜೊತೆ ಟೀಟ್ರೀ ಆಯಿಲ್​ ಮಿಕ್ಸ್​ ಮಾಡಿ, ಹಚ್ಚುವುದರಿಂದ ಚರ್ಮದ ಕಿರಿಕಿರಿ ಮತ್ತು ಅಲರ್ಜಿಯ ಅಪಾಯಗಳನ್ನು ತಡೆಗಟ್ಟಬಹುದು.

2. ಗ್ರೀನ್​ ಟೀ: ಇನ್​ಫ್ಲಾಮೇಶನ್​ ಕಡಿಮೆ ಮಾಡುವ ಗುಣಗಳಿಗೆ ಗ್ರೀನ್​ ಟೀ ಜನಪ್ರಿಯವಾಗಿದೆ. ಇದನ್ನ ಕುಡಿಯುವುದನ್ನ ಹೊರತುಪಡಿಸಿ, ಇದರ ಸಾರಗಳಿಂದ ಕೂಡಿದ ಜೆಲ್​ಗಳು ಮತ್ತು ಲೋಷನ್​ಗಳನ್ನು ನೀವು ಮುಖಕ್ಕೆ ಲೇಪಿಸಿಕೊಳ್ಳಬಹುದು.

3. ಸಿಟ್ರಸ್ ಹಣ್ಣುಗಳು: ಆಲ್ಫಾ ಹೈಡ್ರಾಕ್ಸಿ ಆ್ಯಸಿಡ್​ಗಳು ಅಥವಾ (ಎಎಎಚ್ಎಸ್)ಗಳು ಸಿಟ್ರಸ್ ಹಣ್ಣುಗಳಲ್ಲಿ ಹೆಚ್ಚಾಗಿರುತ್ತದೆ. AHAs w ಡೆಡ್​ ಸ್ಕಿನ್​ಗಳನ್ನ ತೆಗೆದುಹಾಕಲು ಸಹಾಯ ಮಾಡುತ್ತದೆ. ಕಟ್ಟಿಕೊಂಡಿರುವ ಚರ್ಮದ ರಂಧ್ರಗಳನ್ನ ಶುಚಿಗೊಳಿಸುತ್ತದೆ. ಈ ಪರಿಹಾರಗಳನ್ನು ಹೊರತುಪಡಿಸಿ, ಕೆಲವು ಡಯೆಟ್​ಗಳನ್ನ ಮಾಡುವುದರಿಂದ ಕೂಡಾ ಹಾರ್ಮೋನ್​ನಿಂದ ಉಂಟಾಗುವ ಮೊಡವೆಗಳನ್ನ ಕಡಿಮೆ ಮಾಡಿಕೊಳ್ಳಬಹುದು. ಹೆಚ್ಚು ಸೊಪ್ಪು ಸೇವಿಸಿ, ಜೊತೆಗೆ ವಿಟಮಿನ್-ಸಿ ಸಮೃದ್ಧ ಆಹಾರಗಳು, ಒಮೇಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ಚರ್ಮಕ್ಕೆ ಒಳ್ಳೆಯದು.

4. ಕೆಂಪು ಮಾಂಸ, ಸಿಹಿಯಾದ ಆಹಾರಗಳು, ಪಾಸ್ಟಾ ಅಥವಾ ವೈಟ್​ ಬ್ರೆಡ್ ನಂತಹ ರಿಫೈನ್ಡ್​ ಕಾರ್ಬ್ಸ್​ಗಳು ಮತ್ತು ಡೈರಿ ಉತ್ಪನ್ನಗಳು ಹಾರ್ಮೋನ್ ಮೊಡವೆಗಳನ್ನು ಪ್ರಚೋದಿಸಬಹುದು. ಮೊಡವೆ ಸಮಸ್ಯೆಯಿಂದ ಮುಕ್ತಿ ಹೊಂದಬೇಕು ಅಂದ್ರೆ ಇಂತಹ ಆಹಾರಗಳಿಂದ ಆದಷ್ಟು ದೂರ ಇರಿ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv