ಇದೇನು ಧರ್ಮ ಶಾಲೆನಾ..?: ಬಿಜೆಪಿ ಪ್ರತಿಭಟನೆಗೆ ಸಭಾಪತಿ ಹೊರಟ್ಟಿ ಗರಂ

ವಿಧಾನ ಪರಿಷತ್​​ ಕಲಾಪದ ವೇಳೆ ಬಿಜೆಪಿ ಸದಸ್ಯರ ಪ್ರತಿಭಟನೆಗೆ ಸಭಾಪತಿ ಹೊರಟ್ಟಿ ಗರಂ ಆದ್ರು. ಸದನದ ಬಾವಿಯಲ್ಲಿ ಪ್ರತಿಭಟಿಸುವವರು ಮಾತನಾಡಬಾರದು. ನಾನೂ ಪ್ರತಿಭಟನೆ ಮಾಡಿದ್ದೇನೆ. ಆದರೆ ಸದನದ ಬಾವಿಗಿಳಿದಾಗ ಒಮ್ಮೆಯೂ ಮಾತನಾಡಿಲ್ಲ. ಇದೇನು ಧರ್ಮಶಾಲೆಯೇ ಅಂತ ಹೊರಟ್ಟಿ ಗುಡುಗಿದ್ರು.

ಆದರೂ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಗಲಾಟೆ ಮುಂದುವರಿಯಿತು. ಗಲಾಟೆ ಹೆಚ್ಚುತ್ತಿದ್ದಂತೆ ಸದನ ಮುಂದೂಡಿ ಸಮಸ್ಯೆ ಬಗೆಹರಿಸುವಂತೆ ಬಿಜೆಪಿಯ ಮಲ್ಕಾಪುರೆ ಮನವಿ ಮಾಡಿದ್ರು. ಬಳಿಕ ಎನ್.ಪಿ.ಸಿ. ಬಗ್ಗೆ ನಾಳೆ ಸಭೆ ಕರೆದು ಚರ್ಚಿಸುವಂತೆ ಸಭಾಪತಿ ಹೊರಟ್ಟಿ ಶಿಕ್ಷಣ ಸಚಿವರಿಗೆ ಸೂಚನೆ ನೀಡಿದರು. ಸಭೆ ನಡೆಸುವುದಾಗಿ ಸಚಿವರು ಒಪ್ಪಿದ ಬಳಿಕ ಸಭಾಪತಿ ಮಾತಿಗೆ ಬಿಜೆಪಿ ಪ್ರತಿಭಟನೆಯಿಂದ ಹಿಂದೆ ಸರಿಯಿತು. ನಂತರ ಕಲಾಪ ಮುಂದುವರಿಯಿತು.