ಕಳೆದುಹೋಗಿರೋ ಈ ಫೋನ್ ತಂದುಕೊಟ್ರೆ ₹4 ಲಕ್ಷ ಬಹುಮಾನ..!

ಫೋನ್​​​ ಕಳೆದುಕೊಂಡವರಿಗೇ ಗೊತ್ತು ಅದರಿಂದ ಎಷ್ಟು ಬೇಜಾರಾಗುತ್ತೆ ಅಂತ. ಸಾಮಾನ್ಯ ಬಳಕೆದಾರರಿಗೆ ಹೀಗಾಗಬೇಕಾದ್ರೆ ಇನ್ನು ಟೆಕ್​​ ಜೇಂಟ್​​ಗಳಿಗೆ ಹೇಗಾಗಬೇಡ. ಈ ಹಿಂದೆ ಆ್ಯಪಲ್​ ಸಂಸ್ಥೆ ತನ್ನ ಐಫೋನ್ 4ರ ಪ್ರೋಟೋಟೈಪ್ ಫೋನ್​​​ವೊಂದನ್ನು ಪಬ್​​ನಲ್ಲಿ ಕಳೆದುಕೊಂಡಿತ್ತು. ಗೂಗಲ್​​​ನ ಪಿಕ್ಸೆಲ್ 3ಎಕ್ಸ್​​ಎಲ್​ ಫೋನ್​​ ಕೂಡ ಕ್ಯಾಬ್​​ನಲ್ಲಿ ಪತ್ತೆಯಾಗಿತ್ತು. ಈಗ ಹಾನರ್​ ಸಂಸ್ಥೆಯ ಸರದಿ.

ಜರ್ಮನಿಯಲ್ಲಿ ಹಾನರ್​ನ ಮುಂಬರುವ ಫೋನ್​​ವೊಂದರ ಪ್ರೋಟೋಟೈಪ್​​ ಕಳೆದುಹೋಗಿದೆ. ಇದು ಯಾರಿಗಾದ್ರೂ ಸಿಕ್ಕಿದ್ದಲ್ಲಿ ವಾಪಸ್​ ತಂದುಕೊಟ್ರೆ 5,000 ಯೂರೋಸ್​(ಅಂದಾಜು ₹4 ಲಕ್ಷ) ಹಣವನ್ನು ಬಹುಮಾನವಾಗಿ ನೀಡೋದಾಗಿ ಸಂಸ್ಥೆ ಘೋಷಿಸಿದೆ. ಸಂಸ್ಥೆಯ ಉದ್ಯೋಗಿಯೊಬ್ಬರು ಡಸೆಲ್​​ಡಾರ್ಫ್​​ನಿಂದ ಮ್ಯೂನಿಚ್​​ಗೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಈ ಫೋನ್​ ಕಳೆದುಕೊಂಡಿದ್ದಾರೆ ಎಂದು ಸಂಸ್ಥೆ ಟ್ವಿಟರ್​ನಲ್ಲಿ ತಿಳಿಸಿದೆ. ಹಾಗೇ ಬಹುಮಾನದ ಮೊತ್ತವನ್ನೂ ಘೋಷಿಸಿ, ಫೋನ್ ಯಾರಿಗಾದ್ರೂ ಸಿಕ್ಕಿದ್ರೆ ಹಿಂದಿರುಗಿಸುವಂತೆ ಕೇಳಿದೆ. ಕಳೆದುಹೋಗಿರೋ ಪ್ರೋಟೋಟೈಪ್ ಸಾಧನದ ಮೇಲೆ ಗ್ರೇ ಕಲರ್​​ನ ಕೇಸ್​​​ ಇದೆ ಅಂತ ತಿಳಿಸಿದೆ.

ಹಾನರ್​ ಸಂಸ್ಥೆ ಮೇ 21ರಂದು ಲಂಡನ್​​ನಲ್ಲಿ ಹಾನರ್​ 20 ಸೀರೀಸ್​​ ಫೋನ್​ಗಳ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗ ಕಳೆದುಹೋಗಿರೋ ಪ್ರೋಟೋಟೈಪ್​​, ಇದೇ ಸೀರೀಸ್​​ನ ಫೋನ್​ಗಳಲ್ಲಿ ಒಂದಾಗಿರಬಹುದು ಎಂದು ಊಹಿಸಲಾಗಿದೆ. ಹೀಗಾಗಿ ಮೇ 21ರ ನಂತರ ಫೋನ್​​ ತಂದುಕೊಟ್ಟರೆ ಅದರಿಂದ ಉಪಯೋಗವಾಗದೇ ಇರಬಹುದು.

ಏನಿದು ಪ್ರೋಟೋಟೈಪ್ ಫೋನ್ಸ್​?
ಸಾಮಾನ್ಯವಾಗಿ ಮೊಬೈಲ್​ ಕಂಪನಿಗಳು ಮೊಬೈಲ್ ಫೋನ್​ಗಳನ್ನ ಅಧಿಕೃತವಾಗಿ ಬಿಡುಗಡೆ ಮಾಡೋ ಮುನ್ನ ಅದನ್ನ ಪರೀಕ್ಷಿಸೋ ಸಲುವಾಗಿ ತನ್ನ ಉದ್ಯೋಗಿಗಳಿಗೆ ಪ್ರೋಟೋಟೈಪ್​ ಫೋನ್​​ಗಳನ್ನ ವಿತರಿಸುತ್ತದೆ. ಈ ಫೋನ್​ಗಳು ಲೀಕ್​ ಆಗಬಾರದೆಂಬ ಉದ್ದೇಶದಿಂದ ಇದನ್ನ ಕೇಸ್​​ನಿಂದ ಕವರ್​ ಮಾಡಲಾಗಿರುತ್ತದೆ. ಹಾನರ್​ ಸಂಸ್ಥೆಯೂ ಕೂಡ ತನ್ನ ಕಂಪನಿಯ ಮುಂಬರುವ ಫೋನ್​ ಲೀಕ್ ಆಗಬಾರದೆಂಬ ಕಾರಣಕ್ಕೆ ₹4 ಲಕ್ಷ ಬಹುಮಾನ ಘೋಷಿಸಿದೆ. ಆದ್ರೆ ಫೋನ್​​ನ ಫೀಚರ್ಸ್​​ ಬಗ್ಗೆ ಎಕ್ಸ್​​ಕ್ಲೂಸಿವ್​ ಮಾಹಿತಿ ನೀಡುವ ಸಲುವಾಗಿ ಕೆಲವೊಂದು ವೆಬ್​ಸೈಟ್​​ಗಳು ಇದಕ್ಕಿಂತ ಹೆಚ್ಚಿನ ಹಣ ಕೊಡಲು ಕೂಡ ಸಿದ್ಧವಾಗಿರುತ್ತದೆ ಅಂತಾರೆ ಟೆಕ್​​ ಎಕ್ಸ್​ಪರ್ಟ್ಸ್​.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv