ಮರಳಿಗಾಗಿ 5 ದಿನದಿಂದ ಉಪವಾಸ ಸತ್ಯಾಗ್ರಹ: ರೇಣುಕಾಚಾರ್ಯ ಅಸ್ವಸ್ಥ

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಐದು ದಿನಗಳಿಂದ ಧರಣಿ ನಡೆಸುತ್ತಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅಸ್ವಸ್ಥಗೊಂಡಿದ್ದಾರೆ. ನಿನ್ನೆ ನ್ಯಾಮತಿ ಬಂದ್ ಮಾಡಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಕಡಿಮೆ ದರಕ್ಕೆ ಮರಳು ನೀಡಬೇಕೆಂದು ರೇಣುಕಾಚಾರ್ಯ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಶುಗರ್ ಹಾಗೂ ರಕ್ತದೊತ್ತಡ ಖಾಯಿಲೆ ಇರುವ ಹಿನ್ನೆಲೆ, ಬಳಲಿಕೆಯಿಂದ ರೇಣುಕಾಚಾರ್ಯ ಇಂದು ಅಸ್ವಸ್ಥಗೊಂಡಿದ್ದಾರೆ. ಅವರನ್ನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿಯೇ ವೈದ್ಯರು ವೈದ್ಯಕೀಯ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡುತ್ತಿದ್ದಾರೆ. ರೇಣುಕಾಚಾರ್ಯ ಬೇಡಿಕೆ ಈಡೇರಿಕೆ ಆಗುವವರೆಗೂ ಪ್ರತಿಭಟನೆಗೆ ಕರೆ ನೀಡಿದ್ದಾರೆ. ರೇಣುಕಾಚಾರ್ಯ ನಾಳೆ ಹೊನ್ನಾಳಿ ತಾಲೂಕು ಬಂದ್​ಗೆ ಕರೆ ನೀಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv