ಅಯ್ಯಯ್ಯೋ ಹೆಜ್ಜೇನು.. ಮಹಿಳೆಯ ಆರ್ತನಾದ

ದಾವಣಗೆರೆ: ದಾರಿಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ದಿಢೀರನೆ ಹೆಜ್ಜೇನು ದಾಳಿ ನಡೆಸಿದ ಘಟನೆ ನಗರದ ಶಿವಪ್ಪ ವೃತ್ತದ ಬಳಿ ನಡೆದಿದೆ. ಮಹಿಳೆಯೊಬ್ಬರು ತನ್ನ ಪಾಡಿಗೆ ನಡೆದು ಹೋಗುತ್ತಿದ್ದರು. ಆ ವೇಳೆ ಒಂದೇ ಸಮನೆ ಹೆಜ್ಜೇನು ಹುಳುಗಳು ಆಕೆಯ ಮೇಲೆ ದಾಳಿ ನಡೆಸಿವೆ. ಹೆಜ್ಜೇನಿನಿಂದ ತಪ್ಪಿಸಿಕೊಳ್ಳಲು ಮಹಿಳೆ ತುಂಬಾ ಪರದಾಟ ನಡೆಸಿದರು. ಹುಳುಗಳಿಂದ ತಪ್ಪಿಸಿಕೊಳ್ಳಲು ಮಹಿಳೆ ರಸ್ತೆಯ ಮೇಲೆಲ್ಲಾ ಹೊರಳಾಡಿದರೂ ಹುಳುಗಳು ಆಕೆಯನ್ನು ಬಿಟ್ಟಿಲ್ಲ. ಮಹಿಳೆಯ ಅಕ್ರಂದನ ಕೇಳಿ ಆಟೋ ಚಾಲಕನೊಬ್ಬ ಬೆಂಕಿ ಪಂಜನ್ನು ಹಿಡಿದು ಜೇನು ಹುಳುಗಳನ್ನು ಓಡಿಸುವ ಪ್ರಯತ್ನ ಪಟ್ಟಿದ್ದಾನೆ. ಘಟನೆಯಲ್ಲಿ ಮಹಿಳೆಯ ಮುಖದ ಭಾಗಕ್ಕೆ ಹುಳುಗಳು ಕಚ್ಚಿದ್ದು, ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದಾರೆ. ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv