ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡ್ತಿದ್ದ ಕಳ್ಳ ಅರೆಸ್ಟ್

ದಾವಣಗೆರೆ: ಗ್ರಾಮೀಣ ಪ್ರದೇಶದ ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡುತ್ತಿದ್ದ ಕಳ್ಳನನ್ನ ಡಿಸಿಐಬಿ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಫ್ರೋಸ್ ಅಹ್ಮದ್ (35) ಬಂಧಿತ ಆರೋಪಿ. ಈತ ಜಿಲ್ಲೆಯ ಚನ್ನಗಿರಿಯ ಲಷ್ಕರ್ ಮೊಹಲ್ಲಾದ ನಿವಾಸಿ. ಆತನಿಂದ 519 ಗ್ರಾಂ ಚಿನ್ನ ಹಾಗೂ 2.800 ಗ್ರಾಂಬೆಳ್ಳಿ ಸೇರಿ 17.20 ಲಕ್ಷ ರೂಪಾಯಿ ಮೌಲ್ಯದ ನಗನಾಣ್ಯ ವಶಪಡಿಸಿಕೊಳ್ಳಲಾಗಿದೆ. ಆರೋಪಿ ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ 15 ಕಡೆ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv