ಒಂಟಿ ಮಹಿಳೆಯನ್ನು ಹೆದರಿಸಿ ಕಳ್ಳತನ

ಶಿರಸಿ: ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಹೆದರಿಸಿ ಕಳ್ಳತನ ಮಾಡಿರುವ ಘಟನೆ ಶಿರಸಿ ಬಳಿಯ ಶೀಗೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಾವಿತ್ರಿ ಹೆಗಡೆ‌ ಎಂಬುವರ‌ ಮನೆ ಕಳ್ಳತನವಾಗಿದ್ದು, ಮನೆಯಲ್ಲಿದ್ದ ಸಾವಿತ್ರಿಯವರನ್ನು ಹೆದರಿಸಿ ಕಳ್ಳತನ ಮಾಡಿದ್ದಾರೆ. ಮಂಕಿ ಕ್ಯಾಪ್ ಹಾಕಿದ್ದ ನಾಲ್ಕು ಜನರಿಂದ ಕೃತ್ಯ ನಡೆದಿದ್ದಾಗಿ ಸಾವಿತ್ರಿ ಹೇಳುತ್ತಿದ್ದು, 64 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ 1 ಸಾವಿರ ನಗದು ದೋಚಿದ್ದಾರೆ. ಈ ಸಂಬಂಧ ಶಿರಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv