ಲೆಟರ್ ಹೆಡ್ ಬಿಎಲ್​ಡಿಇ ಸಂಸ್ಥೆಯದ್ದು ಅಲ್ಲವೇ ಅಲ್ಲ’

ವಿಜಯಪುರ: ಲೆಟರ್ ಹೆಡ್ ಬಿಎಲ್​ಡಿಇ ಸಂಸ್ಥೆಯದ್ದು ಅಲ್ಲವೇ ಅಲ್ಲ. ಸಂಸ್ಥೆಯ ಲೆಟರ್​​​ಹೆಡ್ ಅನ್ನು ಫೋರ್ಜರಿ ಮಾಡಿದ್ದಾರೆ. ಈಗ ಆದರ್ಶ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ, ಮತ್ತೆ ಎಸ್​​​ಪಿಯವರಿಗೆ ಪ್ರತ್ಯೇಕವಾಗಿ ದೂರು ನೀಡುತ್ತೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್​​ ಹೇಳಿದ್ದಾರೆ. ಈ ಕುರಿತು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಂ.ಬಿ.ಪಾಟೀಲ್​, ಸೈಬರ್ ಕ್ರೈಂ ಮೂಲಕ ತನಿಖೆ ನಡೆಸಲಾಗುತ್ತೆ. ಲಿಂಗಾಯತ ಧರ್ಮಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ. ಮೊದಲಿನಿಂದಲೂ ಇದನ್ನೇ ಹೇಳಿಕೊಂಡು ಬಂದಿದ್ದೇನೆ. ಬಿ.ಎಲ್.ಡಿ.ಇ ಲೆಟರ್​​​​ಹೆಡ್​​​​ಗೂ ಈ ಫೋರ್ಜರಿ ಲೆಟರ್​​​​ಹೆಡ್​​​ಗೂ ಬಹಳ ವ್ಯತ್ಯಾಸವಿದೆ. ಇದೆಲ್ಲವನ್ನೂ ನಮ್ಮ ಕಾನೂನು ತಂಡ ನೋಡಿಕೊಳ್ಳುತ್ತದೆ. ಹೀಗೆ ಮಾಡೋದು ಹೇಸಿಗೆತನ. ವಿಧಾನಸಭಾ ಚುನಾವಣೆಗೂ ಮೊದಲೆ ಮಾಡಿದ್ದಾರೆ. ಈಗಲೂ ಅದೇ ರೀತಿ ಮಾಡಿದ್ದಾರೆ. ಅಭಿವೃದ್ಧಿ ಮೇಲೆಯೇ ಮತ ಕೇಳಿದ್ದೀನಿ. ಯಾವತ್ತು ಚುನಾವಣೆಯಲ್ಲಿ ಲಿಂಗಾಯತ ಹೆಸರು ಬಳಸಿಕೊಂಡು ಮತ ಕೇಳಿಲ್ಲ. ಪೋಸ್ಟ್ ಕಾರ್ಡ್ ಅನ್ನೋ ವೆಬ್ ಸೈಟ್​​ನಲ್ಲಿ ಪ್ರಕಟವಾಗಿತ್ತು. ಇದು ಖೊಟ್ಟಿ ಲೆಟರ್ ಹೆಡ್. ನಾಳೆ ಬೆಂಗಳೂರಿನಲ್ಲಿ ಸುದ್ದಿ ಗೋಷ್ಠಿ ನಡೆಸಲಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv