ನನ್ನ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದರೆ ವಿಷಾದಿಸುತ್ತೇನೆ: ಎಂ.ಬಿ ಪಾಟೀಲ್

ವಿಜಯಪುರ: ಬಿಜೆಪಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಮೇಲೆ ಎಂ.ಬಿ ಪಾಟೀಲ್ ಬೆಂಬಲಿಗರ ಹಲ್ಲೆ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಜಿಲ್ಲೆಯ ಚಡಚಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಂ.ಬಿ ಪಾಟೀಲ್, ನನ್ನ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ರೆ ವಿಷಾದಿಸುತ್ತೇನೆ. ನನ್ನ ಬೆಂಬಲಿಗರು ಇದ್ರೆ ಈ ತರಹದ ಕೆಲಸಕ್ಕೆ ಕೈ ಹಾಕಬಾರದು. ಎಲುಬು ಇಲ್ಲದ ನಾಲಿಗೆ ಹಾಗೆ ನಡಹಳ್ಳಿ ಮಾತನಾಡಬಾರದು. ಚಿಲ್ಲರೆ ಮಾತುಗಳನ್ನು ಆಡಬಾರದು. ಇಲ್ಲದೇ ಇದ್ರೆ ಜನರು ನಮ್ಮ ಕಂಟ್ರೋಲ್​​​ನಲ್ಲಿ ಇರೋದಿಲ್ಲ. ಶಾಸಕ ನಡಹಳ್ಳಿ ತಿದ್ದುಕೊಳ್ಳಬೇಕು. ವಿಜಯಪುರ ಎಸ್.ಪಿ ಯವರಿಂದ ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv