‘ವಾಯುಸೇನೆ ಕಾರ್ಯಾಚರಣೆ ಬಗ್ಗೆ ಯಾರಿಗೂ ಸಾಕ್ಷಿ ಕೇಳಿಲ್ಲ, ವಿಡಿಯೋ ಇದ್ರೆ ಬಿಡುಗಡೆ ಮಾಡಲಿ’

ಹುಬ್ಬಳ್ಳಿ: ಭಾರತೀಯ ವಾಯುಸೇನೆ ನಡೆಸಿದ ಕಾರ್ಯಾಚರಣೆ ಬಗ್ಗೆ ಹೆಮ್ಮೆ ಇದೆ. ಆದರ್ೆ ನಾವು ಯಾರಿಗೂ ಸಾಕ್ಷಿ ಕೇಳಿಲ್ಲ, ಕಾರ್ಯಚರಣೆ ನಡೆದ ಬಳಿಕ ಸಹಜವಾಗಿ ವೀಡಿಯೋ ಸಾಕ್ಷಿ ಬಿಡುಗಡೆ ಮಾಡಲಾಗುತ್ತೆ.‌ ಅದು ಇದ್ದರೆ ಬಿಡುಗಡೆ ಮಾಡಲಿ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಾಕ್ಷಿ ಬಿಡುಗಡೆ ಮಾಡಿ ಎಂದು ನಾವು ಯಾರಿಗೂ ಒತ್ತಾಯ ಮಾಡುವುದಿಲ್ಲ. ಯಾವುದೇ ತೊಂದರೆ ಇಲ್ಲದೆ ಇದ್ದರೆ ಕಾರ್ಯಚರಣೆಯ ಸಾಕ್ಷಿ ಬಿಡುಗಡೆ ಮಾಡಲಿ. ತೊಂದರೆ ಇದ್ದರೆ ಸಾಕ್ಷ್ಯ ಬಿಡುಗಡೆ ಮಾಡವುದು ಬೇಡ ಎಂದು ಹೇಳಿದ್ರು. ಇನ್ನು ಭಾರತೀಯ ವಾಯು ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಿಯಾಂಕ್​​​ ಖರ್ಗೆ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸಾಕ್ಷಿ ಕೇಳಿದ ವಿಚಾರ‌ಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಸಮಾಜಾಯಿಷಿ ನೀಡಲು ಹೇಳಲಾಗಿದೆ. ಅವರು ಏಕೆ ಕೇಳಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಸಾಕ್ಷಿ ಕೇಳುವುದು ಸರಿಯಲ್ಲ. ಸೈನಿಕರ ಸಾವಿನ ಮೇಲೆ ರಾಜಕೀಯ ‌ಮಾಡುವುದು ನಾಚಿಕೆಗೇಡಿನ ಸಂಗತಿ ಎಂದರು.

ಭಾರತೀಯ ಸೇನೆ ಯಾವುದೇ ಪಕ್ಷದ ಸೇನೆಯಲ್ಲ. ಸೇನೆಯನ್ನು ಬಳಸಿ ರಾಜಕೀಯ ಮಾಡೋದು ನಾಚಿಕೆಗೇಡಿನ ಸಂಗತಿ. ಯಡಿಯೂರಪ್ಪ ಮಾತನಾಡಿದ ಪೂರ್ತಿ ವಿಡಿಯೋ ನನ್ನ ಬಳಿ ಇದೆ ಎಂದು ಎಂ.ಬಿ ಪಾಟೀಲ್ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv