16 ರಂದು ಹೋಂ ಮೆಡಿಕೇರ್ ಇಕ್ವಿಪ್​ಮೆಂಟ್ ವಿತರಣೆ

ಹುಬ್ಬಳ್ಳಿ: ಸಾರ್ವಜನಿಕ ವಲಯದಲ್ಲಿ ಶೈಕ್ಷಣಿಕ ಸೇವೆಗಳನ್ನು ಮಾಡುತ್ತಾ ಬಂದಿರುವ ಮಜೇಥಿಯಾ ಫೌಂಡೇಶನ್ ವತಿಯಿಂದ ಇದೇ ಜೂ. 16 ರಂದು ನಗರದಲ್ಲಿ ಹೋಂ ಮೆಡಿಕೇರ್ ಇಕ್ವಿಪ್​ಮೆಂಟ್ ಸೆಂಟರ್​​​ನ್ನು ಆರಂಭಿಸಲಾಗುವುದು ಎಂದು ಫೌಂಡೇಶನ್ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಅಂದು ಇಲ್ಲಿನ ಐ.ಬಿ. ರಸ್ತೆಯಲ್ಲಿರುವ ಗಿರಿರಾಜ ಅನೆಕ್ಸ್​ನಲ್ಲಿ ಪ್ರಾರಂಭಗೊಳ್ಳುವ ಸೆಂಟರ್​ನ್ನು ಡಾ. ರಮೇಶಬಾಬು ಹಾಗೂ ಡಾ.ಜಿ.ಬಿ.ಸತ್ತೂರ ಉದ್ಘಾಟಿಸಲಿದ್ದಾರೆ. ಸಾರ್ವಜನಿಕರಿಗೆ ಮತ್ತು ವಿಶೇಷಚೇತನರಿಗೆ ಸಹಕಾರಿ ವಸ್ತುಗಳನ್ನು ನೀಡಲಾಗಿದೆ. ಅವುಗಳನ್ನು ಅವರ ಮನೆಯಲ್ಲಿಯೇ ಉಪಯೋಗಿಸಲು ನೀಡಲಾಗಿದ್ದು, ಅವುಗಳನ್ನು 21 ದಿನಗಳವರೆಗೆ ಬಳಸಿ ವಾಪಸ್ಸು ಮಾಡಿದಲ್ಲಿ ಸಲಕರಣೆಗೆ ಇಟ್ಟಂತಹ ಠೇವಣಿಯನ್ನು ಹಿಂದಿರುಗಿಸಲಾಗುವುದು ಎಂದು ಹೇಳಿದ್ರು.
ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಮನವಿ
ಮಜೇಥಿಯಾ ಫೌಂಡೇಶನ್ ವತಿಯಿಂದ, ಮಡಚುವ ಗಾಲಿ ಖುರ್ಚಿಗಳು, ಶೌಚಗೃಹದ ಗಾಲಿ ಖುರ್ಚಿಗಳು, ಮಲಗುವ ಮಂಚ, ಅಲ್ಯುಮಿನಿಯಂ ನಡಿಗೆ ಸಾಧನ, ಮೂರು ಮತ್ತು ನಾಲ್ಕು ಕಾಲಿನ ನಡಿಗೆ ಕೋಲು, ಗಾಳಿ ತುಂಬುವ ಮಲಗುವ ಹಾಸಿಗೆ, ವಿರಾಮ ದಿಂಬು, ಕಫಾ ತೆಗೆಯುವ ಯಂತ್ರ, ಆಮ್ಲಜನಕ ಮುಖ ಸಾಧನ (ಸಿಲಿಂಡರ್ ರಹಿತ) ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟ ವೈದ್ಯರಿಗೆ ಉಪಯೋಗಿಸಲು ನೀಡಲಾಗುವುದು ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv