ಮಹಿಳೆಯರಿಗೆ ಮನೆಯೇ ಮಾರಕವಂತಯ್ಯ..!

ನವದೆಹಲಿ: ಹೊರಗಡೆ ಮಹಿಳೆಯರಿಗೆ ರಕ್ಷಣೆ ಇಲ್ಲ ಅಂತಾ ಹೆಣ್ಣುಮಕ್ಕಳು ಮನೆಯಲ್ಲೇ ಇರಲಿ ಅನ್ನೋರು ಬಹಳಷ್ಟು ಮಂದಿ ಸಿಕ್ತಾರೆ. ಆದರೆ, ಯಾವ ಜಾಗ ಮಹಿಳೆಯರ ರಕ್ಷಣೆಗಿದೆ ಅಂತಾ ಹೇಳಲಾಗ್ತಿದೆಯೋ ಈಗ ಅದೇ ಜಾಗ ಮಹಿಳೆಯರ ಪಾಲಿಗೆ ಮಾರಕವಾಗಿದೆ ಅನ್ನೋ ವರದಿಯನ್ನ ಸಮೀಕ್ಷೆ  ಹೇಳಿದೆ.

ರಕ್ಷಣೆ ನೀಡೋ ಮನೆಯಾಯಿತಂತೆ ಅಪಾಯಕಾರಿ ತಾಣ
ಇಂತದ್ದೊಂದು ಬೆಚ್ಚಿ ಬೀಳಿಸೋ ಸುದ್ದಿಯನ್ನು ಯುನೈಟೆಡ್‌ ನೇಷನ್ಸ್‌ ಆಫೀಸ್‌ ಆನ್‌ ಡ್ರಗ್ಸ್‌ ಅಂಡ್‌ ಕ್ರೈಮ್‌ ಅನ್ನೋ ಸಂಸ್ಥೆ ನೀಡಿದೆ. ಈ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಕಳೆದ ವರ್ಷ, 2017ರಲ್ಲಿ ಇಡೀ ವಿಶ್ವದಾದ್ಯಂತ ಸುಮಾರು 87,000 ಮಹಿಳೆಯರು ತಮ್ಮ ಆಪ್ತರಿಂದಲೇ ವಿವಿಧ ಕಾರಣಗಳಿಂದಾಗಿ ಹತ್ಯೆಗೀಡಾಗಿದ್ದಾರಂತೆ. ಅಂದ್ರೆ, 1 ದಿನಕ್ಕೆ ಸುಮಾರು 137 ಮಹಿಳೆಯರು ತಮ್ಮ ಮನೆಯವರಿಂದಲೇ ಸಾವಗೀಡಾಗಿದ್ದಾರಂತೆ. 1 ಗಂಟೆಗೆ ಸುಮಾರು 6 ಮಹಿಳೆಯರು ಹತ್ಯೆಗೀಡಾಗುತ್ತಿದ್ದಾರೆ ಅನ್ನೋ ಮಾಹಿತಿಯನ್ನು ಸಮೀಕ್ಷೆ ಹೇಳಿದೆ. ಹೀಗಾಗಿ, ಮನೆಯೇ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ತಾಣ ಎಂದು ಹೇಳಿದೆ.

ಅದ್ರಲ್ಲೂ ಆಫ್ರಿಕಾ ಮತ್ತು ಅಮೇರಿಕಾ ದೇಶದಲ್ಲಿ ಅತೀ ಹೆಚ್ಚು ಮಹಿಳೆಯರು ತಮ್ಮ ಸಂಬಂಧಿಕರಿಂದಲೇ ಕೊಲೆಯಾಗಿದ್ದಾರೆ ಅನ್ನೋ ಆಘಾತಕಾರಿ ಸುದ್ದಿಯನ್ನು ಅಂಕಿ-ಅಂಶಗಳ ಮೂಲಕ ಹೊರಹಾಕಿದೆ. ಈ ನಿಟ್ಟಿನಲ್ಲಿ ಆಫ್ರಿಕಾ ಮೊದಲ ಸ್ಥಾನದಲ್ಲಿದ್ರೆ, ಅಮೇರಿಕಾ ಎರಡನೇ ಸ್ಥಾನದಲ್ಲಿ, ಓಷಿಯಾನಿಯಾ ಮೂರನೇ ಸ್ಥಾನ, ಯುರೋಪ್‌ ನಾಲ್ಕನೇ ಸ್ಥಾನ ಮತ್ತು ಏಷಿಯಾ ಐದನೇ ಸ್ಥಾನದಲ್ಲಿದೆ ಅಂತಾ ತಿಳಿಸಿದೆ. ಈ ದೇಶದಲ್ಲಿ ಅತೀ ಹೆಚ್ಚು ಮಹಿಳೆಯರು ತಮ್ಮ ಸಂಬಂಧಿಕರು, ಆಪ್ತರು, ಪರಿಚಯಸ್ಥರಿಂದಲೇ ಕೊಲೆಯಾಗಿದ್ದಾರಂತೆ. ಸಂಗಾತಿಗಳಿಂದ ಹತ್ಯೆ, ಆಪ್ತರು, ನೆಂಟರಿಂದ ಹತ್ಯೆ, ಹೆಣ್ಣೆಂಬ ಕಾರಣಕ್ಕೆ ಹತ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಹೆಣ್ಣುಮಕ್ಕಳನ್ನು ಹತ್ಯೆ ಮಾಡಲಾಗುತ್ತಿದೆಯಂತೆ.