ಮನೆಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಅಕ್ಕ-ತಮ್ಮ ಸಾವು

ಕಲಬುರಗಿ: ತಗಡಿನ ಮನೆ ಮೇಲೆ ವಿದ್ಯುತ್ ತಂತಿ ಬಿದ್ದು ಅಕ್ಕ-ತಮ್ಮ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ‌ ಗ್ರಾಮದಲ್ಲಿ ಘಟನೆ ಸಂಭವಿಸಿದೆ. 65 ವರ್ಷದ ತಿಪ್ಪವ್ವ ಹಾಗೂ 60 ವರ್ಷದ ನರಸಪ್ಪ ಕಿಣಗಿ ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಅಕ್ಕ ತಿಪ್ಪವ್ವ ಸ್ನಾನ‌ ಮಾಡುತ್ತಿದ್ದ ವೇಳೆ ತಗಡಿನ‌ ಮನೆಗೆ ಆಕಸ್ಮಿಕ ವಿದ್ಯುತ್ ತಂತಿ ಸ್ಪರ್ಷಿಸಿದೆ. ಅಕ್ಕನ ಚೀರಾಟ ಕೇಳಿಸಿಕೂಂಡ ತಮ್ಮ ನರಸಪ್ಪ ಅಕ್ಕನನ್ನು ರಕ್ಷಿಸಲು ಹೋಗಿ ದುರ್ಮರಣಕ್ಕಿಡಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv