ಬ್ರಿಟನ್‌ನ ಕ್ವೀನ್ ಎಲಿಜಬೆತ್ ಯುದ್ಧನೌಕೆಯ ಕ್ಯಾಪ್ಟನ್ ಅಮಾನತು

ಲಂಡನ್: ಬ್ರಿಟನ್ ನೌಕಾಪಡೆಯ ಅತಿದೊಡ್ಡ, ಶಕ್ತಿಯುತವಾದ ಯುದ್ದನೌಕೆ ಎಚ್ಎಂಎಸ್‌ ಕ್ವೀನ್‌ ಎಲಿಜಬೆತ್‌ನ ಕ್ಯಾಪ್ಟನ್‌ನನ್ನು ವಜಾಗೊಳಿಸಲಾಗಿದೆ. ರಕ್ಷಣಾ ಇಲಾಖೆಗೆ ಸೇರಿದ ಕಾರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಡದಿ ಕ್ಯಾಪ್ಟನ್ ಹುದ್ದೆಯಿಂದ ವಜಾಗೊಳಿಸಲಾಗಿದೆ. 50 ವರ್ಷದ ಕಮಾಂಡರ್ ನಿಕ್‌-ಕುಕ್ ಪ್ರೀಸ್ಟ್‌ ಬ್ರಿಟನ್ ರಕ್ಷಣಾ ಇಲಾಖೆಯ ಕಾರನ್ನು ತಮ್ಮ ಖಾಸಗಿ ಪ್ರವಾಸಕ್ಕೆ ಬಳಕೆ ಮಾಡಿದ್ದಾರೆ ಎಂದು ರಾಯಲ್ ನ್ಯಾವಿ ತಿಳಿಸಿದೆ. ಅಲ್ಲದೇ ಕುಕ್ ಪ್ರೀಸ್ಟ್ ಕಾರನ್ನು ಬಳಕೆ ಮಾಡಿಕೊಂಡಿದರ ಬಗ್ಗೆ ಯಾವುದೇ ಕಾರಣಗಳನ್ನ ನೀಡಿಲ್ಲ ಎಂದು ತಿಳಿಸಿದೆ. ವಜಾಗೊಳಿಸಿದ ಬೆನ್ನಲ್ಲೇ ಕ್ವೀನ್ ಎಲಿಜಬೆತ್ ಯುದ್ಧನೌಕೆಗೆ ಹೊಸ ಕಮಾಂಡರ್‌ನ ನೇಮಕ ಮಾಡಿದೆ. ನೌಕಾಪಡೆಗೆ ಸೇರಿದ ಫೋರ್ಡ್ ಗ್ಯಾಲಕ್ಸಿ ಕಾರುಗಳನ್ನು ನೌಕಾಪಡೆ ಸಿಬ್ಬಂದಿ ಅಧಿಕೃತ ಕಾರ್ಯಗಳಿಗೆ ಮಾತ್ರ ಬಳಕೆ ಮಾಡಬಹುದಾಗಿದೆ. ಆದ್ರೆ ಕುಕ್ ಪ್ರೀಸ್ಟ್ ಅದನ್ನು ದುರ್ಬಳಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಹುದ್ದೆಯನ್ನು ಕಳೆದುಕೊಂಡಿದ್ದಾರೆ. ನಿಕ್‌-ಕುಕ್ ಪ್ರೀಸ್ಟ್‌ 1990ರಲ್ಲಿ ರಾಯಲ್ ನ್ಯಾವಿಯ ಹೆಚ್‌ಎಂಎಸ್ ಕ್ವೀನ್ ಎಲಿಜಬೆತ್ ಯುದ್ಧ ನೌಕೆಯ ಕಮಾಂಡರ್ ಆಗಿ ನೇಮಕವಾಗಿದ್ದರು. ಇನ್ನು ಹೆಚ್‌ಎಂಎಸ್ ಕ್ವೀನ್ ಎಲಿಜಬೆತ್ 40 ಯುದ್ಧವಿಮಾನಗಳನ್ನು ಹೊತ್ತೊಯ್ಯಬಲ್ಲ ಸುಸಜ್ಜಿತ ನೌಕೆಯಾಗಿದ್ದು, ಇಂಗ್ಲೆಂಡ್‌ನ ಅತ್ಯಂತ ಶಕ್ತಿಶಾಲಿಯಾದ ಯುದ್ಧನೌಕೆಯಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv