ಚನ್ನಪಟ್ಟಣದಲ್ಲಿ ಸ್ಪರ್ಧೆ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಹೆಚ್‌.ಎಂ.ರೇವಣ್ಣ

ಬೆಂಗಳೂರು: ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ಬಗ್ಗೆ ನನ್ನ ಬಳಿ ಯಾರೂ ಮಾತನಾಡಿಲ್ಲ ಎಂದು ಸಾರಿಗೆ ಸಚಿವ ಹೆಚ್‌.ಎಂ.ರೇವಣ್ಣ ಫಸ್ಟ್‌ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ.

ಇಷ್ಟಾದ್ರೂ ಹೈ ಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಅಂತಾ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸ್ಪರ್ಧೆ ಬಗ್ಗೆ ಚರ್ಚೆಯಾಗಿರೋದು ಗೊತ್ತಿಲ್ಲ. ಹೈಕಮಾಂಡ್‌ ಟಿಕೆಟ್ ನೀಡಿದ್ರೆ ನೋಡೋಣ ಅಂತಾ ಹೇಳಿದರು. ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಅಂತಾ ಹೇಳಿದರು. ಹೈಕಮಾಂಡ್‌ ತೆಗೆದುಕೊಳ್ಳವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಇನ್ನೂ ಬಾದಾಮಿ ಕ್ಷೇತ್ರದ ಉಸ್ತುವಾರಿ ನಿಭಾಯಿಸುವ ಬಗ್ಗೆ ಕೇಳಿದ ಪ್ರಶ್ನೆಗೆ, ಜವಾಬ್ಧಾರಿ ಕೊಟ್ಟರೆ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೆಚ್‌.ಎಂ.ರೇವಣ್ಣ ಹೇಳಿದರು.

Leave a Reply

Your email address will not be published. Required fields are marked *