ಬೈಕ್​ ಸ್ಕಿಡ್​ ಆಗಿ ಸವಾರ ಸಾವು

ನೆಲಮಂಗಲ: ತಾಲೂಕಿನ ಮಹದೇವಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ​ ಸಂಚರಿಸುತ್ತಿದ್ದ ಪಲ್ಸರ್​ ಬೈಕೊಂದು ಸ್ಕಿಡ್​ ಆದ ಪರಿಣಾಮ, ಸವಾರನೋರ್ವ ಮೃತಪಟ್ಟಿದ್ದಾನೆ. ಮೃತ ದುರ್ದೈವಿಯನ್ನ ತುಮಕೂರು ಜಿಲ್ಲೆಯ ಕುಣಿಗಲ್​ ತಾಲೂಕಿನ ತಿಮ್ಮಸಂದ್ರ ನಿವಾಸಿ 38 ವರ್ಷದ ಶಿವಕುಮಾರ್​ ಎಂದು ಗುರುತಿಸಲಾಗಿದೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *