ಪ್ರಸಿದ್ಧ ಗುರು ನಾನಕ್ ಅರಮನೆ ಧ್ವಂಸ, ಬೆಲೆ ಬಾಳುವ ವಸ್ತುಗಳ ಮಾರಿದ ಪಾಪಿಸ್ತಾನಿಯರು..!

ಲಾಹೋರ್​ (ಪಾಕಿಸ್ತಾನ): ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನದಿಂದ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ಅವ್ರ ಐತಿಹಾಸಿಕ ಪ್ರಸಿದ್ಧ ಅರಮನೆಯನ್ನ ಪಾಕ್​ನ ಪುಡಾರಿಗಳ ಗುಂಪೊಂದು ಧ್ವಂಸ ಮಾಡಿ, ಅದರಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.

ಪಂಜಾಬ್ ಪ್ರಾಂತ್ಯದ ಬಥ್ನವಾಲಾ ಗ್ರಾಮದ ಲಾಹೋರ್​ ರಸ್ತೆ ಬಳಿಯಿದ್ದ ಪ್ಯಾಲೇಸನ್ನ ಅಲ್ಲಿನ ಸ್ಥಳೀಯರ ಗುಂಪೊಂದು ಡೆಮಾಲೀಶ್ ಮಾಡಿದೆ. ಅರಮನೆಯನ್ನ ಕೆಡವಿದ ಬಳಿಕ, ಬಾಗಿಲು, ಕಿಟಕಿ, ಫ್ಯಾನ್​ಗಳು ಜೊತೆಗೆ ಬೆಲೆಬಾಳುವ ವಸ್ತುಗಳನ್ನ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. 400 ವರ್ಷಗಳ ಹಿಂದೆ ಈ ಅರಮನೆಯನ್ನ ಕಟ್ಟಲಾಗಿತ್ತು. ಲಾಹೋರ್​​ನಿಂದ 20 ಕಿಲೋ ಮೀಟರ್​ ದೂರದಲ್ಲಿದ್ದ ಬಥ್ನವಾಲಾ ಗ್ರಾಮದಲ್ಲಿ ಈ ಪ್ಯಾಲೇಸ್​ ನಿರ್ಮಾಣವಾಗಿತ್ತು.

ಗುರು ನಾನಕ್ ಅರಮನೆಯನ್ನ ಹಳೆಯ ಇಟ್ಟಿಗೆಗಳು, ಮರಳು, ಮಣ್ಣಿನ ಮತ್ತು ಸುಣ್ಣಕಲ್ಲುಗಳಿಂದ ಕಟ್ಟಲಾಗಿತ್ತು. ಕಟ್ಟಡದಲ್ಲಿ ವಿಶಾಲವಾದ 16 ದೊಡ್ಡ ಕೋಣೆಗಳು ಇದ್ದವು. ಕಟ್ಟಡದಲ್ಲಿದ್ದ ಎಲ್ಲಾ ರೂಮ್​ಗಳು ವಿಶಾಲವಾಗಿ ನಿರ್ಮಾಣ ಮಾಡಲಾಗಿತ್ತು. ಸಿಖ್ ಧರ್ಮಕ್ಕೆ ಸಂಬಂಧಿಸಿದ ಫೋಟೋಗಳು, ಪುಸ್ತಕಗಳು, ಅಪಾರ ಮೌಲ್ಯದ ಬೆಲೆ ಬಾಳುವ ವಸ್ತುಗಳು ಈ ಕಟ್ಟಡದಲ್ಲಿದ್ದವು.

‘‘ಈ ಕಟ್ಟಡವನ್ನ ಬಾಬಾ ಗುರು ನಾನಕ್ ಅವರ ಅರಮನೆ ಎಂದು ಕರೆಯಲಾಗುತ್ತಿತ್ತು. ನಾವು ಅದಕ್ಕೆ ಮಹಲಾನ್ ಎಂದು ಕರೆಯುತ್ತಿದ್ದೆವು. ಭಾರತೀಯರೂ ಸೇರಿದಂತೆ ಲಕ್ಷಾಂತರ ಸಿಖ್​ರ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಗುರು ನಾನಕ್ ಅವರ ಆಶೀರ್ವಾದ ಪಡೆದು ಹೋಗುತ್ತಿದ್ದರು’’

-ಮೊಹಮ್ಮದ್ ಅಸ್ಲಾಮ್, ಸ್ಥಳೀಯರು

ವಕ್ಫ್​ ಇಲಾಖೆ ಕಟ್ಟಡವನ್ನ ಕೆಡವುವ ಬಗ್ಗೆ ನಿರ್ಧಾರ ಮಾಡಿತ್ತು. ನಾಲ್ಕು ಅಂತಸ್ತಿನ ಈ ಅರಮನೆಯಲ್ಲಿ ಮೂರು ಮಹಡಿಯನ್ನ ವಕ್ಫ್ ಇಲಾಖೆ ಕೆಡವಿ, ಅಲ್ಲಿನ ಬೆಲೆ ಬಾಳುವ ವಸ್ತುಗಳನ್ನ ಮಾರಾಟ ಮಾಡಿತ್ತು. ಇದೀಗ ಅದರಿಂದಲೇ ಪ್ರೇರೇಪಿತಗೊಂಡ ದುಷ್ಕರ್ಮಿಗಳ ಗುಂಪೊಂದು ಈ ಕೆಲಸ ಮಾಡಿದೆ. ಆದರೆ ಇದುವರೆಗೂ ಯಾವುದೇ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ ಎಂದು ಸ್ಥಳೀಯ ಮೊಹಮ್ಮದ್ ಅರ್ಷಫ್ ಕಿಡಿಕಾರಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv