ಮನೆ ಮನೆಯಲ್ಲೂ ವಾಗ್ಮೋರೆ..! ಏನಿದು ಫೇಸ್​ಬುಕ್​ ಕ್ಯಾಂಪೇನ್​..?

ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್ ಹಂತಕ ಪರಶುರಾಮ್ ವಾಗ್ಮೋರೆ ಬಂಧನವಾದ ಬೆನ್ನಲ್ಲೇ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಫೇಸ್ಬುಕ್​ನಲ್ಲಿ ಹೊಸ ಕ್ಯಾಂಪೇನ್ ಶುರು ಮಾಡಿದ್ದಾರೆ. ಇನ್ನು ಶ್ರೀರಾಮ ಸೇನೆಯ ಮಹಿಳಾ ಘಟಕದ ಅಧ್ಯಕ್ಷೆ, ಹಾಗು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆಯಾಗಿರುವ ಮಂಚಾಳೇಶ್ವರಿ, ಫೇಸ್ಬುಕ್​ನಲ್ಲಿ ವಿವಾದಾತ್ಮಕ ಪೋಸ್ಟ್​ ಮಾಡುವ ಮೂಲಕ ಈಗ ಸುದ್ದಿಯಲ್ಲಿದ್ದಾರೆ.

‘ಮನೆ ಮನೆಯಲ್ಲೂ ಪರಶುರಾಮ್ ವಾಗ್ಮೋರೆ ಹುಟ್ಟುತ್ತಾನೆ’ ಎಂದು ಪೋಸ್ಟ್ ಮಾಡಿದ್ದಾರೆ. ಈ ದೇಶದ ತಳಹದಿ ಹಿಂದೂತ್ವ. ಲದ್ದಿಜೀವಿಗಳು, ಹಿಂದೂ ವಿರೋಧಿ ಚಟುವಟಿಕೆ ಮಾಡಿದ್ರೆ ಮನೆ ಮನೆಗೂ ಪರಶುರಾಮ್ ವಾಗ್ಮೋರೆ ಯಂತವರು ಹುಟ್ಟುತ್ತಾರೆ ಅಂತಾ ಪೋಸ್ಟ್​ ಮಾಡಿ, ಬುದ್ಧಿಜೀವಿಗಳನ್ನ ಲದ್ದಿ ಜೀವಿಗಳು ಅಂತ ಟೀಕಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv