ಅಬುಧಾಬಿ ಕೋರ್ಟ್​​ಗಳಲ್ಲಿ ಹಿಂದಿಯೂ ಅಧಿಕೃತ ಭಾಷೆ..!

ಭಾರತದ ಭಾಷೆಗಳಿಗೆ ವಿದೇಶಗಳಲ್ಲೂ ಹೆಚ್ಚಿನ ಗೌರವ ಸಿಗುತ್ತಿದೆ. ಕೆಲ ದೇಶಗಳಲ್ಲಿ ಭಾರತೀಯ ಭಾಷೆ ಆಯಾ ದೇಶಗಳ ಅಧಿಕೃತ ಭಾಷೆಗಳಲ್ಲಿ ಒಂದಾಗಿಯೂ ಬಳಕೆಯಾಗುತ್ತಿದೆ. ಇದೀಗ ಅಬುದಾಬಿ ಹಿಂದಿ ಭಾಷೆಗೆ ಇಂಥದ್ದೊಂದು ಮಾನ್ಯತೆಯನ್ನ ನೀಡಿದೆ.
ಅಬುದಾಬಿಯ ನ್ಯಾಯಾಲಯಗಳಲ್ಲಿ ಮೂರನೇ ಅಧಿಕೃತ ಭಾಷೆಯಾಗಿ ಹಿಂದಿಯನ್ನ ಅಂಗೀಕರಿಸಲಾಗಿದೆ. ಇಷ್ಟು ದಿನಗಳ ಕಾಲ ಅರಬಿಕ್ ಹಾಗೂ ಇಂಗ್ಲೀಷ್ ಭಾಷೆಗಳು ಮಾತ್ರ ಅಧಿಕೃತ ಭಾಷೆಗಳಾಗಿದ್ದವು. ಇನ್ಮೇಲೆ ಹಿಂದಿಯನ್ನೂ ಅಬುದಾಬಿಯ ಕೋರ್ಟ್​​ಗಳಲ್ಲಿ ಅಧಿಕೃತ ಭಾಷೆಯಾಗಿ ಬಳಕೆ ಮಾಡಲಾಗುತ್ತದೆ.
ಯುಎಇಯಲ್ಲಿರುವ ಒಟ್ಟಾರೆ ಜನ ಸಂಖ್ಯೆಯಲ್ಲಿ ಭಾರತೀಯ ಪ್ರಜೆಗಳ ಸಂಖ್ಯೆ ಹೆಚ್ಚಾಗಿದೆ. ಸುಮಾರು 26 ಲಕ್ಷ ಭಾರತೀಯರು ಯುಎಇಯಲ್ಲಿ ನೆಲೆಸಿದ್ದಾರೆ. ಇದೀಗ ಹಿಂದಿ ಭಾಷೆಯನ್ನ ಅಧಿಕೃತ ಭಾಷೆಯಾಗಿ ಅಂಗೀಕರಿಸಿರುವುದರಿಂದ ಅಲ್ಲಿನ ಕಾನೂನು, ಕಟ್ಟಳೆಗಳನ್ನ ಭಾರತೀಯರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತೆ ಅಂತ ಅಲ್ಲಿನ ಸರ್ಕಾರ ಹೇಳಿದೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv