ಇದು ಹಿಮಾಲಯನ್ ವಯಾಗ್ರ, ಬೆಲೆ ಚಿನ್ನಕ್ಕಿಂತ ಹೆಚ್ಚು..!!!

ಅಖಾಡಕ್ಕೆ ಇಳಿದ್ರೆ ಎದುರಾಳಿ ಮಣ್ಣಾಗಬೇಕು, ತೊಡೆ ತಟ್ಟಿದ್ರೆ ವಿರೋಧಿ ಎದೆ ಝಲ್ ಎನ್ನಬೇಕು, ಹಾಸಿಗೆ ಮೇಲೆ ಬಂದ್ರೆ ಸಂಗಾತಿಯ ಲಜ್ಜೆಯಲ್ಲ ನೀರಾಗಿ ಚಿಮ್ಮ ಬೇಕು, ನಾನೂ ಹೀಗಿರಬೇಕು..! ಅನ್ನೋದು ಪ್ರತಿ ಗಂಡಿನ ಆಸೆ. ಇದಕ್ಕೆ ವಯಸ್ಸಿನ ಹಂಗಿಲ್ಲ. ಯುವಕನಾಗಿದ್ದಾಗ ಹುಡುಗಾಟದಲ್ಲಿ, ಹೊಲ ಫಲವತ್ತಾಗೋ ಹಾಗೆ ಮೇಟಿ ಮೀಟ ಬೇಕು ಅನ್ನೋ ಆಸೆ ಇದ್ದರೆ, ವಯಸ್ಸಾದಾಗ ಅನುಭವದ ಆಧಾರದಲ್ಲಿ ಯಾವ ಬಟನ್, ಯಾವಾಗ ಒತ್ತಿದರೆ, ಎಲ್ಲಿ ಲೈಟು ಹತ್ತುತ್ತೆ ಅಂತ ನನಗೆ ಗೊತ್ತು ಅನ್ನೋ ಹಮ್ಮು ಇದ್ದೇ ಇರುತ್ತೆ. ಆಸೆ ಆಗಸದಂತೆ..! ಅದಕ್ಕೆ ಇತಿಯಿಲ್ಲ, ಮಿತಿಯಿಲ್ಲ.. ಆದ್ರೆ ದೇಹ ಹಾಗಲ್ಲ.. ಆಸೆ ಸ್ವತಂತ್ರ- ದೇಹ ಬಂಧಿ..! ಅನುವಂಶಿಕತೆ, ಆಹಾರ, ವ್ಯಾಯಾಮ, ಸಮಯ, ಸಂದರ್ಭ, ಪರಿಸರದಲ್ಲಿನ ಮಾಲಿನ್ಯತೆ, ಉಸಿರಾಡಲು ಸರಿಯಾಗಿ ದೊರೆಯದ ಕ್ಲೀನ್ ಆಕ್ಸಿಜೆನ್, ಹಾರ್ಮೋನುಗಳ ಆಟಾಟೋಪ ಹೀಗೆ ಪ್ರತಿಯೊಂದೂ ದೇಹದ ಬಲಾ-ಬಲದ ಮೇಲೆ ಪರಿಣಾಮ ಬೀರೇ ಬಿರುತ್ತೆ. ಪ್ರತಿಯೊಬ್ಬ ಪುರುಷನಿಗೂ ಗಟ್ಟಿಯಾಗಿ ಕಂಬ ನೆಟ್ಟು, ಸಂಗಾತಿ ಮನದಲ್ಲಿ ತನ್ನ ಧ್ವಜ ಹಾರಿಸಬೇಕು ಅನ್ನೋ ಮಹದಾಸೆ ಇದ್ದರೂ ಎಷ್ಟೋ ಬಾರಿ ದೇಹ ಮಾತ್ರ ಅದಕ್ಕೆ ಸಹಕರಿಸೋದೇ ಇಲ್ಲ. ಹಲವರಿಗೆ ಗಟ್ಟಿಯಾಗಿ ನಿಲ್ಲುವುದೇ ಸಮಸ್ಯೆಯಾಗಿದ್ರೆ, ಇನ್ನು ಎಷ್ಟೋ ಜನರಿಗೆ ಬಂದ ಕೆಲಸವನ್ನು ಬಾಗಿಲಲ್ಲೇ ಮುಗಿಸಿ ಬಿಡುವ ಅವಸ್ಥೆ..! ಹೀಗಾದಾಗ, ಸಹಜವಾಗಿ ಖಿನ್ನತೆ, ತನ್ನ ಮೇಲೆ ಅಪನಂಬಿಕೆ, ನನ್ನ ಸಂಗಾತಿಗೆ ಸರಿಯಾಗಿ ತೃಪ್ತಿ ನೀಡಲು ಆಗಲಿಲ್ಲ ಎಂಬ ನೋವು, ನನ್ನ ಬಿಟ್ಟು ನನ್ನ ಸಂಗಾತಿ ಬೇರೆಯವರ ಸಾಂಗತ್ಯ ಬಯಸುತ್ತಿದ್ದಾಳಾ? ಎಂಬ ಅನುಮಾನ ಕರ್ಪೂರದಂಥ ಮನಸ್ಸಿಗೆ ಕಿಡಿ ಹೊತ್ತಿಸಿಯೇ ಬಿಡುತ್ತವೆ. ಹೀಗಾಗಿಯೇ, ತನಗೆ ನೈಸರ್ಗಿಕವಾಗಿ ಸಾಧ್ಯವಾಗದಿದ್ದದ್ದನ್ನು, ನಿಸರ್ಗದ ಸಹಾಯದಿಂದಲೇ ಸಾಧಿಸುವ ಬಯಕೆ ಹೆಚ್ಚಾಗುತ್ತೆ. ಇಂಥವರಿಗಾಗಿಯೇ ನಿಸರ್ಗ ಸೃಸ್ಟಿಸಿರೋ ಅಮೃತವೇ ಯರ್ಸಗುಂಬಾ ಅಥವಾ ಹಿಮಾಲಯನ್ ವಯಾಗ್ರ..!

ಏನಿದು ಯರ್ಸಗುಂಬಾ..?

ಚಿನ್ನಕ್ಕಿಂತಲೂ ಬೆಲೆ ಬಾಳುವ, ಕಾಮೋತ್ತೇಜಕ ಗುಣಗಳನ್ನು ಹೊಂದಿರುವ ನೈಸರ್ಗಿಕ ವಯಾಗ್ರ ಯರ್ಸಗುಂಬಾ, ಇದರ ವೈಜ್ಞಾನಿಕ ಹೆಸರು Ophiocordyceps sinensis. ಇದೊಂದು ಕಂಬಳಿ ಹುಳುವಿನ ಬೂಷ್ಟು. ಕಂಬಳಿ ಹುಳು ಮಳೆಗಾಲದಲ್ಲಿ ಬೂಷ್ಟಾಗಿ ಪರಿವರ್ತನೆಗೊಳ್ಳುತ್ತದೆ. ಮಳೆಗಾಲದ ಎಣ್ಣೆ ಮಿಶ್ರಿತ ಮಣ್ಣನಲ್ಲಿರುವ ಮರಿ ಕಂಬಳಿಹುಳು ಬೂಷ್ಟಿನ ಸೊಂಕಿಗೆ ಒಳಗಾಗುತ್ತದೆ. ಬೂಷ್ಟು ಹುಳುವಿನ ತಲೆ ಮೇಲೆ ದಾಳಿ ಮಾಡಿದಾಗ ಮರಿಹುಳು ಸಾಯುತ್ತದೆ. ಆದೇ ಬೂಷ್ಟು ಮೃತ ಮರಿ ಕಂಬಳಿಹುಳುವಿನ ತಲೆಯಲ್ಲಿ ಬೆಳೆಯುತ್ತದೆ. ಸುಮಾರು 2 ರಿಂದ 3 ಇಂಚುಗಳಷ್ಟು ಉದ್ದ ಬೆಳೆಯುವ ಅದು ಕ್ರಮೇಣ ಕಂದು ಬಣ್ಣಕ್ಕೆ ತಿರುಗಿ ನೈಸರ್ಗಿಕ ವಯಾಗ್ರವಾಗಿ ಮಾರ್ಪಾಡಾಗುತ್ತದೆ.

ಎಲ್ಲಿ ಸಿಗುತ್ತೆ..?
ಯರ್ಸಗುಂಬಾ ಇದು ಹಿಮಾಲಯದ ತಪ್ಪಲಿನಲ್ಲಿ ಮಾತ್ರ ಸಿಗೋದು. ಮೇ ಮತ್ತು ಜೂನ್ ತಿಂಗಳಿನಲ್ಲಿ ನೇಪಾಳದಲ್ಲಿ ವಿಪರೀತ ಮಳೆ ಸುರಿಯುತ್ತದೆ. ಈ ವೇಳೆ ಕಂಬಳಿ ಹುಳು ವಯಾಗ್ರವಾಗಿ ಪರಿವರ್ತನೆಗೊಳ್ಳುತ್ತದೆ. ಭಾರತ, ನೇಪಾಳ, ಚೀನಾದ ಹಿಮಾಲಯದ ಪರ್ವತಗಳಲ್ಲಿ ಮಾತ್ರ ಇದು ಸಿಗುತ್ತೆ.

ವಯಾಗ್ರಕ್ಕಾಗಿ ನಡೆಯುತ್ತೆ ಫೈಟಿಂಗ್..!


ಹಿಮಾಲಯ ಪರ್ವತದ ತುತ್ತ ತುದಿಯಲ್ಲಿರೋ ಈ ನೈಸರ್ಗಿಕ ವಯಾಗ್ರಕ್ಕೆ ಚಿನ್ನಕ್ಕಿಂತಲೂ ಹೆಚ್ಚು ಬೇಡಿಕೆ ಇದೆ. ಒಂದು ಕೆಜಿ ಯರ್ಸಗುಂಬಾ ಬೆಲೆ ಕನಿಷ್ಟ 70 ರಿಂದ 75 ಲಕ್ಷ ರೂಪಾಯಿ..! ಅಂದರೆ ಸುಮಾರು 10 ಗ್ರಾಂ ಅಥವಾ ಒಂದು ತೊಲ ಯರ್ಸಗುಂಬಾ ಬೆಲೆ ಹತ್ತಿರ ಹತ್ತಿರ 70 ಸಾವಿರ ರೂಪಾಯಿ..! ಹೀಗಾಗಿ ನೇಪಾಳದ ಸಾವಿರಾರು ಕುಟುಂಬಗಳು ಇದನ್ನೇ ನಂಬಿಕೊಂಡು ಬದುಕುತ್ತಿವೆ. ಆದರೆ ಹಿಮಾಲಯದ ತುದಿಯನ್ನ, ಪ್ರಪಾತವನ್ನ ಹತ್ತಿ ಈ ವಯಾಗ್ರ ಹುಡುಕೋದು ಅಷ್ಟು ಸುಲಭವಲ್ಲ. ಆಕಸ್ಮಾತ್ ಕಾಲು ಜಾರಿತು ಅಂದ್ರೆ ದೇಹದ ಯಾವುದೇ ಭಾಗ ಸಿಗೋದೂ ಕಷ್ಟ. ಜೊತೆಗೆ ಭಾರಿ ಡಿಮ್ಯಾಂಡ್ ಇರೋದ್ರಿಂದ ವಯಾಗ್ರ ಹುಡುಕುವ ವಿಚಾರಕ್ಕೆ ಆಗಾಗ ಗಲಾಟೆಗಳು, ಹೊಡೆದಾಟಗಳು ನಡೆಯುತ್ತಲೇ ಇರುತ್ತವೆ. ವಿಶೇಷ ಅಂದ್ರೆ ನೇಪಾಳ ಸರ್ಕಾರ ಮಾತ್ರ ಈ ವಯಾಗ್ರ ಸಂಗ್ರಹಿಸುವ ಕುಟುಂಬಗಳಿಗೆ ವಿದ್ಯುತ್, ಆರೋಗ್ಯ, ರಕ್ಷಣೆ, ಮಕ್ಕಳಿಗೆ ಶಿಕ್ಷಣ ಎಲ್ಲವನ್ನೂ ನೀಡುತ್ತಿದೆ. ನೇಪಾಳದ ಸೆಂಟ್ರಲ್ ಬ್ಯಾಂಕ್ ನಡೆಸಿದ ಅಧ್ಯಯನ ವರದಿ ಪ್ರಕಾರ, ಇಲ್ಲಿನ ಕುಟುಂಗಳ ಆದಾಯ ಶೇ. 56 ರಷ್ಟು ಮೂಲ ಇದೇ ವಯಾಗ್ರ ಎಂದಿದೆ.

‘ಯರ್ಸಗುಂಬಾ’ಕ್ಕೆ ಪವರ್ ಏನು..?
ಇದು ಪುರುಷ ಮತ್ತು ಸ್ತ್ರೀ ಇಬ್ಬರಿಗೂ ಕಾಮೋತ್ತೇಜಕ್ಕೆ ಸಹಾಯಕ. ಸೆಕ್ಸ್​ನಲ್ಲಿದ್ದಾಗ ಬಳಲುವಿಕೆ ಮತ್ತು ಆಯಾಸವನ್ನ ಯರ್ಸಗುಂಬಾ ತಪ್ಪಿಸುತ್ತದೆ ಹಾಗೂ ಏಕಾಗ್ರತೆಯನ್ನ ಹೆಚ್ಚಿಸಿ ಒತ್ತಡವನ್ನ ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲ, ವೀರ್ಯ, ಅಂಡಾಣುಗಳು ಪವರ್​​ಫುಲ್ ಆಗಿರುವಂತೆ ನೋಡಿಕೊಳ್ಳುತ್ತೆ. ವಿಶೇಷ ಅಂದ್ರೆ ಯರ್ಸಗುಂಬಾ ಕಾಮೋತ್ತೇಜಕ ಗುಣಗಳನ್ನ ಮಾತ್ರ ಹೊಂದಿಲ್ಲ. ಇದನ್ನ ಸೇವಿಸೋದ್ರಿಂದ ಕಿಡ್ನಿಯ ಸಾಮರ್ಥ ಕೂಡ ಹೆಚ್ಚುತ್ತೆ. ಜೊತೆಗೆ, ಇದು ಶ್ವಾಸಕೋಶಗಳ ಬೆಳವಣಿಗೆಗೂ ಸಹಾಯಕವಾಗಿದೆ. ಸ್ನಾಯುಗಳು ಮತ್ತು ದೇಹ ಶಕ್ತಿಯನ್ನೂ ಸಹ ಇದು ಬಲಪಡಿಸುತ್ತದೆಯಂತೆ. ರೇಡಿಯೊಥೆರಪಿ, ಕೆಮೊಥೆರಪಿ ಪಡೆದ ಟ್ಯುಮರ್ ರೋಗಿಗಳಿಗೂ ಇದು ಸಹಾಯಕ. ರಕ್ತದಲ್ಲಿ ಪ್ಲಾಸ್ಮಾ ಕಣವನ್ನು ಉತ್ಪತ್ತಿ ಮಾಡಲು ಸಹಾಯಕವಾಗಿರುವ ಇದು, ದುರ್ಬಲತೆ ಮತ್ತು ಅಕಾಲಿಕ ಉದ್ವೇಗದ ಮುಕ್ತಿಗೆ ರಾಮಬಾಣವಾಗಿದೆ. ಅಲ್ಲದೇ ನರ ಹಾಗೂ ಚರ್ಮದ ಸಮಸ್ಯೆಗೆ, ಸಂಧಿವಾತ ಚಿಕಿತ್ಸೆಗೆ, ಸಿರೋಸಿಸ್ ಚಿಕಿತ್ಸೆಗೆ, ಸೊಂಟ ಮತ್ತು ಮಂಡಿ ನೋವುಗಳನ್ನ ನಿವಾರಿಸಲು ಸಹಾಯಕವಾಗಿದೆ ಎನ್ನಲಾಗಿದೆ.

ಹೇಗೆ ಸೇವಿಸಬೇಕು..?
ಇದನ್ನ ಹಾಗೆಯೇ ಕೂಡ ತಿನ್ನಬಹುದು. ಅಲ್ಲದೇ ಪುಡಿ ಮಾಡಿ ಹಾಲಿನೊಂದಿಗೆ ಬೆರಸಿ ಕುಡಿಯಬಹುದು. ಇದು ಅಣಬೆ ರುಚಿ ಹಾಗೂ ಪರಿಮಳ ಹೊಂದಿರುತ್ತದೆ. ಸ್ವಲ್ಪ ಸಿಹಿ ಕೂಡ ಆಗಿರುತ್ತದೆ ಎಂದು ತಿಳಿದು ಬಂದಿದೆ.

ವಿಶೇಷ ಬರಹ: ಗಣೇಶ್ ಕೆರೆಗುಳಿ
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv