ಹೆದ್ದಾರಿ ಸುಲಿಗೆಕೋರರ ಬಂಧನ

ತುಮಕೂರು: ಹೆದ್ದಾರಿ ಕಾರ್ಯಾಚರಣೆಯಲ್ಲಿ ಇಬ್ಬರು ಸುಲಿಗೆಕೋರರನ್ನು ಬಂಧಿಸುವಲ್ಲಿ ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಹಮದ್ ಸುಲ್ತಾನ್ ಮತ್ತು ಸೈಯದ್ ಆಸೀಫ್ ಬಂಧಿತ ಆರೋಪಿಗಳು. ಜೂ 18 ರಂದು ರಾ.ಹೆ. 4 ರ ಮಂಚಕಲ್ ಕುಪ್ಪೆ ಬಳಿ ಸುಲಿಗೆಕೋರರು, ಕ್ಯಾಂಟರ್ ಲಾರಿ ಚಾಲಕನನ್ನ ಬೆದರಿಸಿ ನಗದು‌ ಕಸಿದು ಪರಾರಿಯಾಗಿದ್ದರು. ನಂತರ ಚಾಲಕ ಹರಿಕೃಷ್ಣ, ಕ್ಯಾತ್ಸಂದ್ರ ಠಾಣೆಗೆ ದೂರನ್ನ ನೀಡಿದ್ದರು. ಬಳಿಕ ತನಿಖೆ ಕೈಗೆತ್ತಿಕೊಂಡ ಪಿಎಸ್‌ಐ ರಾಜು ನೇತೃತ್ವದ ತಂಡ, ಕಾರ್ಯಾಚರಣೆಯನ್ನು ನಡೆಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv