ಅತ್ಯಾಚಾರ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಮುಕ್ತಿಯಿಲ್ಲ

ರಾಮನಗರ: ಅತ್ಯಾಚಾರ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅತ್ಯಾಚಾರ ಆರೋಪ ಕೇಸ್ ಬಿಡಬೇಕೆಂದು ನಿತ್ಯಾನಂದ ಸ್ವಾಮಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶನಿವಾರ ವಜಾಗೊಳಿಸಿದೆ. ಇದರೊಂದಿಗೆ ರಾಮನಗರ ಸೆಷನ್ಸ್ ಕೋರ್ಟ್ ಆದೇಶ ಎತ್ತಿಹಿಡಿದಂತಾಗಿದೆ. ಇದರಿಂದ ನಿತ್ಯಾನಂದ ಇನ್ನು, ಸೆಷನ್ಸ್ ಕೋರ್ಟ್​ನಲ್ಲಿ ವಿಚಾರಣೆ ಎದುರಿಸಬೇಕಾಗಿದೆ. ಹೈಕೋರ್ಟ್ ನ್ಯಾಯಧೀಶರಾದ ಆರ್. ಬಿ. ಬೂದಿಹಾಳ್ ನೇತೃತ್ವದ ಪೀಠ ನಿತ್ಯಾನಂದ ಸ್ವಾಮಿಯ ಅರ್ಜಿ ವಜಾಗೊಳಿಸುತ್ತಾ, ರಾಮನಗರ ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ಆದೇಶವನ್ನು ಶ್ಲಾಘನೆ ಮಾಡಿದೆ. ಅತ್ಯಾಚಾರ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿ ವಿರುದ್ಧ ಆರೋಪ ನಿಗದಿಗೆ ಸೆಷನ್ಸ್ ಕೋರ್ಟ್ ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ನಿತ್ಯಾನಂದ ಸ್ವಾಮಿ ಮತ್ತಿತರರು ಹೈಕೋರ್ಟ್ ಗೆ ಕ್ರಿಮಿನಲ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv