ಶಾಸಕ ಗಣೇಶ್​ ಜಾಮೀನು ಆದೇಶ ಕಾಯ್ದಿರಿಸಿದ ಹೈಕೋರ್ಟ್​

ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಶಾಸಕ ಜೆ.ಎನ್.ಗಣೇಶ್ ನಡೆಸಿದ ಹಲ್ಲೆ ಪ್ರಕರಣದ ತೀರ್ಪನ್ನ ಹೈಕೋರ್ಟ್​ ಕಾಯ್ದಿರಿಸಿದೆ.

ಶಾಸಕ ಗಣೇಶ್ ಪರ ವಾದ ಮಂಡಿಸಿದ ವಕೀಲ ಬಿ.ವಿ.ಆಚಾರ್ಯ, ಗಲಾಟೆ ನಡೆದಿರುವುದನ್ನು ಆರೋಪಿ ನಿರಾಕರಿಸುತ್ತಿಲ್ಲ. ಇದು ಪೂರ್ವಯೋಜಿತ ಹಲ್ಲೆಯಾಗಿಲ್ಲ. ಮೊದಲಿಗೆ ಆನಂದ್ ಸಿಂಗ್ ಹಲ್ಲೆ ನಡೆಸಿದ್ದರು. ಆತ್ಮರಕ್ಷಣೆಗಾಗಿ ಗಣೇಶ್ ಪ್ರತಿದಾಳಿ ನಡೆಸಿದ್ದಾರೆ. ಘಟನೆ ನಡೆದ ಮೇಲೆ ಅಲ್ಲಿದ್ದ ಇತರೆ ಶಾಸಕರು ದೂರು ನೀಡಿಲ್ಲ.

ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರಿನಲ್ಲಿ ಹೂ ಕುಂಡ, ದೊಣ್ಣೆಯಿಂದ ಹಲ್ಲೆ ಆರೋಪ ಮಾಡಿದ್ದಾರೆ. ಹೀಗಾಗಿ ಇದು ಪೂರ್ವ ಸಿದ್ಧತೆಯೊಂದಿಗೆ ನಡೆದ ಘಟನೆಯಲ್ಲ. ಸಚಿವರು, ಶಾಸಕರೇ ಘಟನೆಯ ಸಾಕ್ಷಿಗಳಾಗಿದ್ದಾರೆ.  ಹೀಗಾಗಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಸಾಧ್ಯವೇ ಇಲ್ಲ ಅಂತಾ ವಾದ ಮಂಡಿಸಿದ್ರು. ಬಳಿಕ ವಕೀಲ ಸಿ.ಹೆಚ್.ಹನುಮಂತರಾಯಪ್ಪ, ಈ ಆಧಾರದ ಮೇಲೆ ಕಂಪ್ಲಿ ಗಣೇಶ್​​ಗೆ ಜಾಮೀನು ನೀಡಬೇಕಾಗಿ ಮನವಿ ಮಾಡಿದ್ರು.

ಈ ವಾದಕ್ಕೆ ಸರ್ಕಾರ ಪರ ವಕೀಲರಿಂದ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲ ಚಂದ್ರಮೌಳಿ ಜಾಮೀನು ನೀಡದಂತೆ ಪ್ರತಿವಾದಿಸಿದ್ರು. ಉದ್ದೇಶಪೂರ್ವಕ ಹಲ್ಲೆ ಎನ್ನವುದಕ್ಕೆ ಸಾಕ್ಷಿಗಳಿವೆ. ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಕೋರ್ಟ್​ಗೆ ಸಲ್ಲಿಸಲಾಗಿದೆ. ಆರೋಪಿ ಎಂಎಲ್ಎ ಆಗಿರುವುದಿಂದ ಪ್ರಭಾವಶಾಲಿಯಾಗಿದ್ದಾರೆ. ಮೀನು ನೀಡಿದ್ರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೇ ಗನ್ ಕೊಡಿ ಮುಗಿಸುತ್ತೇನೆ ಎಂದಿರುವುದಕ್ಕೂ ಸಾಕ್ಷಿಯಿದೆ. ಜೊತೆಗೆ ವಿಕ್ಟಿಂ ಅವರು ಹೊರ ಬಂದ್ರೆ ಜೀವಕ್ಕೆ ಭಯವಿದೆ ಎಂದಿದ್ದಾರೆ ಅಂತಾ ಪ್ರತಿವಾದಿಸಿದ್ರು. ವಾದ-ಪ್ರತಿವಾದದ ಆಲಿಸಿದ ಬಿ.ಎ.ಪಾಟೀಲ್ ಅವರ ಏಕಸದಸ್ಯ ಪೀಠ, ಜಾಮೀನು ಆದೇಶವನ್ನು ಕಾಯ್ದಿರಿಸಿತು. ಈ ಹಿಂದೆ ಜನಪ್ರತಿನಿಧಿ ನ್ಯಾಯಲಯ ಕೂಡಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.