ಮಡಿವಾಳ ಬಾಂಬ್ ಬ್ಲಾಸ್ಟ್, ಆರೋಪಿ ಸಲೀಂಗೆ 14 ದಿನಗಳ ಪೊಲೀಸ್​ ಕಸ್ಟಡಿ

ಬೆಂಗಳೂರು: ನಗರದ ಮಡಿವಾಳ ಚೆಕ್ ಪೊಸ್ಟ್ ಬಳಿ ಸಂಭವಿಸಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧ ಪಟ್ಟ ಆರೋಪಿ ಸಲೀಂನನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಆರೋಪಿ ಸಲೀಂನನ್ನು ಸಿಸಿಬಿ ಪೊಲೀಸರು 10 ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದರು. ನಿನ್ನೆ ಕೇರಳದಲ್ಲಿ ACP ಸುಬ್ರಮಣ್ಯ ತಂಡ ಸಲೀಂನನ್ನು ಬಂಧನ ಮಾಡಿ, ಇಂದು ಬೆಂಗಳೂರಿಗೆ ಕರೆತಂದಿತ್ತು.

ಪ್ರಕರಣ ಕುರಿತು ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು, ಆರೋಪಿ ಸಲೀಂನನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. 2008 ರಲ್ಲಿ ಮಡಿವಾಳದ ಚೆಕ್​ಪೋಸ್ಟ್​ ಬಳಿ ಬಾಂಬ್​   ಸ್ಫೋಟಗೊಂಡಿತ್ತು. ಈ ಸ್ಫೋಟದಲ್ಲಿ ಒರ್ವ ಮಹಿಳೆ‌ ಮೃತಪಟ್ಟಿದ್ದರು.