ಮಾನಹಾನಿ ಸುದ್ದಿ ಪ್ರಸಾರ ವಿಚಾರ; ಹೈಕೋರ್ಟ್​ನಿಂದ ತೇಜಸ್ವಿ ಸೂರ್ಯಗೆ ಮುಖಭಂಗ

ಬೆಂಗಳೂರು: ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ತಡೆ ಕೋರಿ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿ ಇತ್ಯರ್ಥವಾಗಿದೆ. ಮಾದ್ಯಮಗಳಲ್ಲಿ ನನ್ನ ಬಗ್ಗೆ ಅವಹೇಳನಕಾರಿ ಸುದ್ದಿ ಪ್ರಸಾರ ಮಾಬಾರದು ಅಂತಾ ತೇಜಸ್ವಿ ಸೂರ್ಯ ಅಧೀನ ನ್ಯಾಯಲಯದಿಂದ ಸ್ಟೇ ತಂದಿದ್ದರು.
ಇದನ್ನ ಪ್ರಶ್ನಿಸಿ ದೆಹಲಿ ಮೂಲದ ಡೆಮಾಕ್ರಟಿಕ್ ರಿಫಾರ್ಮ್ ಆರ್ಗನೈಸೇಷನ್‌ ಹೈ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಸುದ್ದಿ ಪ್ರಸಾರ ಮಾಡುವುದು ಬಿಡುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟ ವಿಚಾರ. ತೇಜಸ್ವಿ ಸೂರ್ಯ ಬಗ್ಗೆ ಸರಿ ಅನಿಸಿದ ಸುದ್ದಿ ಹಾಕಬಹುದು. ಆ ಸುದ್ದಿ ತೇಜಸ್ವಿ‌ ಅವರಿಗೆ ಅವಹೇಳನಕಾರಿ ಅನಿಸಿದ್ರೆ ನ್ಯಾಯಲಯದ ಮೊರೆ ಹೋಗುವಂತೆ ಹೈಕೋರ್ಟ್​ ಸೂಚನೆ ನೀಡಿತು.
ಅರ್ಜಿದಾರ ಪರ ವಾದ ಮಾಡಿದ ಬಿ.ಎನ್.ಹರೀಶ್, ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ವ್ಯವಸ್ಥೆಗೆ ವಿರುದ್ಧವಾಗಿದೆ. ಅಭ್ಯರ್ಥಿಯ ಪೂರ್ವಾಪರ, ಹಿನ್ನೆಲೆ ತಿಳಿದುಕೊಳ್ಳಲು ಮತದಾರನಿಗೆ ಹಕ್ಕಿದೆ. ನಿರ್ಬಂಧಿಸುವುದು ಮತದಾರರ ಹಕ್ಕು ಮೊಟಕುಗೊಳಿಸಿದಂತಾಗುವುದು ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮ ಮೇಲೆ ನಿರ್ಬಂಧ ಸರಿಯಲ್ಲವೆಂದು ವಾದ ಮಾಡಿದ್ರು. ಈ ವೇಳೆ ತೇಜಸ್ವಿ ಸೂರ್ಯ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಆಕ್ಷೇಪಿಸಿದರು. ಅರ್ಜಿದಾರರ ಅರ್ಜಿ ದುರುದ್ದೇಶ ಪೂರಿತವಾಗಿದೆ‌. ಅರ್ಜಿದಾರರು ಅಸಲು ದಾವೆಯ ಪ್ರತಿವಾದಿಗಳಲ್ಲ‌. ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರೂ ಅಲ್ಲ. ಹಾಗಾಗಿ ಸಿವಿಲ್ ನ್ಯಾಯಾಲಯದ ಆದೇಶ ಪ್ರಶ್ನಿಸುವ ಯಾವುದೇ ಹಕ್ಕಿಲ್ಲವೆಂದು ವಾದಿಸಿದ್ದರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಅರ್ಜಿ ಇತ್ಯರ್ಥಗೊಳಿಸಿತು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv