ಸಿಸಿ ಕ್ಯಾಮರಾಗೆ ಅನಧಿಕೃತ ಫ್ಲೆಕ್ಸ್ ಹಾಕೋವ್ರು ಒಬ್ರೂ ಸಿಗಲಿಲ್ವಾ? ಸಿಜೆ ತೀವ್ರ ತರಾಟೆ

ಬೆಂಗಳೂರು: ರಾಜಧಾನಿಯಲ್ಲಿ ಭೂತಾಕಾರವಾಗಿ ಬೆಳೆದಿರುವ ಫ್ಲೆಕ್ಸ್​, ಬ್ಯಾನರ್ಸ್​, ಹೋರ್ಡಿಂಗ್ಸ್​ಗಳ ಸಮಸ್ಯೆ, ಅವುಗಳನ್ನು ಚಿವುಟಿಹಾಕಲು ಬಿಬಿಎಂಪಿ ವಿಫಲವಾಗಿರುವುದು.. ಇವೇ ಮುಂತಾದ ವಿಚಾರಗಳ ಬಗ್ಗೆ ಹೈಕೋರ್ಟ್​ನಲ್ಲಿ ಇಂದು ವಿಚಾರಣೆ ನಡೆಯಿತು.
ನೀವು ಏನ್ ಕೆಲಸ ಮಾಡಿದ್ದೀರಿ ಎಂದು ದಾಖಲೆಗಳು ಹೇಳುತ್ತಿವೆ ಎಂದು ಪಾಲಿಕೆ ಕಾರ್ಯವೈಖರಿಗೆ ಸಿಜೆ ದಿನೇಶ್ ಮಹೇಶ್ವರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ತಿಂಗಳಲ್ಲಿ ಫ್ಲೆಕ್ಸ್ ಹೋರ್ಡಿಂಗ್ ಸಮಸ್ಯೆಗೆ ಅಂತ್ಯ ಹೇಳಲೇಬೇಕು ಎಂದೂ ಸಿಜೆ ಖಡಕ್​ ಆದೇಶ ನೀಡಿದರು. ವಿಚಾರಣೆಯನ್ನ ಆಗಸ್ಟ್ 14 ಕ್ಕೆ ಮುಂದೂಡಿದರು.

ಅನಧಿಕೃತ ಫ್ಲೆಕ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್​ನಲ್ಲಿ ವಾದ-ಪ್ರತಿವಾದ ಸರಣಿ ಹೀಗೆ ನಡೆಯಿತು:
ಎಜಿ ಉದಯ್ ಹೊಳ್ಳ : 223 FIR ದಾಖಲಿಸಲಾಗಿದೆ.
ಸಿಜೆ: ಯಾರ ಮೇಲೆ ಕ್ರಮಕೈಗೊಂಡಿದ್ದಿರಿ?
ಬಿಬಿಎಂಪಿ ವಕೀಲ ಶ್ರಿನಿಧಿ: ಫ್ಲೆಕ್ಸ್​ನಲ್ಲಿರುವ ವ್ಯಕ್ತಿಯ ಮೇಲೆ ಕ್ರಮ ಸಾಧ್ಯವಿಲ್ಲ.
ಸಿಜೆ: ಶುಭಾಶಯ ಕೋರುವವರು ಅಂತ ಕೆಳಗೆ ಹಾಕಿರ್ತಾರಲ್ಲ ಅವರ ಮೇಲೆ ಕ್ರಮ ತೆಗೆದುಕೊಳ್ಳಬಹುದಲ್ಲ?
ಸಿಜೆ: ನಗರದಲ್ಲಿ ಸಿಸಿಟಿವಿ ಕ್ಯಾಮರಾಗಳು ಇವೆ. ಒಂದೇ ಒಂದರ ವಿಡಿಯೋ ಸಿಕ್ಕಿಲ್ವಾ? ವಿಡಿಯೋ ಸಿಕ್ಕಲ್ಲಿ ಪೊಲೀಸರು ಯಾವ ಕ್ರಮ ಕೈಗೋಳ್ತಿರಿ?
ಸರ್ಕಾರದ ಪರ ವಕೀಲ ಚಂದ್ರಮೌಳಿ ವಾದ: 12 ಪ್ರಕರಣಗಳಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಿಬಿಎಂಪಿ ನೀಡಿದ ಕೇಸ್​ ಸಂಬಂಧ ಅರೆಸ್ಟ್ ಮಾಡಲಾಗಿದೆ.
ಸಿಜೆ: ಪೊಲೀಸರಿಂದ ಯಾವ ಕ್ರಮ‌ ಆಗಿದೆ? ಎಲ್ಲ ಪ್ರಕರಣಗಳನ್ನು ಮಿಕ್ಸ್ ಮಾಡಬೇಡಿ? ಎಷ್ಟು ಪ್ರಕರಣಗಳ ತನಿಖೆ ಮುಗಿದಿದೆ? ಒಂದೇ ಒಂದು ಪ್ರಕರಣದಲ್ಲಿ ಚಾರ್ಜ್ ಶೀಟ್ ತೋರಿಸಿ?

ಎಜಿ ಉದಯ್ ಹೊಳ್ಳ: ಫ್ಲೆಕ್ಸ್ ತೆರವು ವೇಳೆ ರಾಮಮೂರ್ತಿ ನಗರದಲ್ಲಿ ಪಾಲಿಕೆ ಅಧಿಕಾರಿಗಳ ಮೇಲೆ ಪ್ರಕರಣ. ಈ ಸಂಬಂಧ 8 ಮಂದಿಯ ಅರೆಸ್ಟ್ ಮಾಡಲಾಗಿದೆ. ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಎಜಿಗೆ ಸಿಜೆ ಸೂಚನೆ: 223 ಕೇಸ್ ತನಿಖಾ ವರದಿ ಆಗಸ್ಟ್ 14ರ ಒಳಗೆ ಸಲ್ಲಿಸಬೇಕು. ನಿಮ್ಮ ಅಧಿಕಾರಿಗಳಿಗೆ ಹೇಳಿ, ತನಿಖೆ ಮುಗಿಸಿ. ನೀವೇ ಈ ಪ್ರಕರಗಳ ಮೇಲ್ವಿಚಾರಣೆ ನಡೆಸಿ ಎಂದು ಎಜಿಗೆ ಸೂಚನೆ.

ಇನ್ನು, ನಗರ ಪೊಲೀಸ್ ಇಲಾಖೆ ಪರ ಜಂಟಿ ಆಯುಕ್ತ ಸತೀಶ್ ಕುಮಾರ್ ಹಾಜರಾಗಿದ್ದರು. ಕೋರ್ಟ್​ನಲ್ಲಿ ಜಂಟಿ ಆಯುಕ್ತರು ಏನು ಹೇಳಿದರು..
ಸತೀಶ್ ಕುಮಾರ್: ನಿನ್ನೆ 10ನೇ ಎಸಿಎಂಎಂ ಕೋರ್ಟ್ ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ನಗರದಲ್ಲಿ ಹಲವು ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿವೆ. ಬೇರೆ ಬೇರೆ ಮ್ಯಾಜಿಸ್ಟ್ರೇಟ್ ಮುಂದೆ ಚಾರ್ಜ್ ಶೀಟ್ ಸಲ್ಲಿಸಲಾಗುತ್ತೆ.
ಎಲ್ಲ ಚಾರ್ಜ್ ಶೀಟ್ ಒಂದೆ ಕೋರ್ಟ್ ನಲ್ಲಿ ಕಂಬೈಂಡ್ ಮಾಡಿ ಡೆಡಿಕೇಟೆಡ್ ಮ್ಯಾಜಿಸ್ಟ್ರೇಟ್ ರಿಗೆ ಜವಾಬ್ದಾರಿ ನೀಡುವಂತೆ ಸರ್ಕಾರಕ್ಕೆ ಸೂಚನೆ ನಿಡುವಂತೆ ಎಜಿ ಉದಯ್ ಹೊಳ್ಳ ಮೂಲಕ ಸಿಜೆ ದಿನೇಶ್ ಮಹೇಶ್ವರಿ ಅವರಿಂದ ಸೂಚನೆ.

ಪಾಲಿಕೆ ವಕೀಲರು: ನಿನ್ನೆ 10 ನೇ ಎಸಿಎಂಎಂ ಕೋರ್ಟ್ ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಈವರೆಗೂ ಸರ್ಕಾರಿ ಜಾಗದಲ್ಲಿರುವ ಹೋರ್ಡಿಂಗ್ ತೆರವು ಮಾಡಲಾಗಿಲ್ಲ
ಸಿಜೆ ದಿನೇಶ್ ಮಹೇಶ್ವರಿ: ಯಾಕೆ ಇನ್ನೂ ಸಂಪೂರ್ಣವಾಗಿ ತೆರವು ಸಾಧ್ಯವಾಗಿಲ್ಲ. 99.99% ಆದರೂ ಅದು ಸಂಪೂರ್ಣ ಅಲ್ಲ. ಸಂಪೂರ್ಣವಾಗಿ ಕೆಲಸ ಆಗಬೇಕು ಎಂದು ಪಾಲಿಕೆ ವಕೀಲರಿಗೆ ಸಿಜೆ ತಾಕೀತು. ಮುಂದಿನ ವಿಚಾರಣೆ ವೇಳೆ ಯಾವುದೂ ಉಳಿದಿರಬಾರದು ಎಂದೂ ಸಿಜೆ ಸೂಚನೆ.

ಪಾಲಿಕೆ ವಕೀಲ ಶ್ರೀನಿಧಿ: ಬೆಂಗಳೂರಿನಲ್ಲಿ 20 ಸಾವಿರ ಹೋರ್ಡಿಂಗ್ ಸ್ಟ್ರಕ್ಚರ್ಸ್ ಇವೆ ಎಂದಾಗ ಬೆಂಗಳೂರಿನಲ್ಲಿ 20 ಸಾವಿರ ಹೋರ್ಡಿಂಗ್ ಸ್ಟ್ರಕ್ಚರ್ಸ್ ಇವೆಯೇ ಎಂದು ಅಚ್ಚರಿ ವ್ಯಕ್ತಪಡಿಸಿದ ಸಿಜೆ.
ಖಾಸಗಿ ಆಸ್ತಿ, ಕಟ್ಟಡಗಳಲ್ಲಿಯೂ ಸ್ಟ್ರಕ್ಚರ್ಸ್ ನಿರ್ಮಾಣ ಮಾಡಲಾಗಿದ್ದು ತೆರವು ಮಾಡಲಾಗುವುದು ಎಂದು ಪಾಲಿಕೆ ವಕೀಲ ಶ್ರೀನಿಧಿ ಭರವಸೆ.

ಬಿಬಿಎಂಪಿ ಮಂಜುನಾಥ್ ಪ್ರಸಾದ್ ಉತ್ತರ
ಸಿಜೆ: ಯಾವಾಗಿನಿಂದ ಈ ಆ್ಯಪ್ ಕೆಲಸ ಮಾಡುತ್ತಿದೆ?
ಬಿಬಿಎಂಪಿ ಮಂಜುನಾಥ್ ಪ್ರಸಾದ್: ಕಳೆದ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಆ್ಯಪ್​ನಲ್ಲಿ ಕೆಲಸ ಮಾರ್ಪಾಡು ಮಾಡುತ್ತಿದ್ದೇವೆ. ಅಕ್ರಮ ಹೋರ್ಡಿಂಗ್ ತಡೆಗಟ್ಟಲು ಹೊಸ ಆ್ಯಪ್ ಮಾಡಿದ್ದೇವೆ. ನಗರದಲ್ಲಿ ಯಾವುದೇ ಹೋರ್ಡಿಂಗ್ ಹಾಕಿದರೂ ಅದರಲ್ಲಿ ಗೊತ್ತಾಗುತ್ತೆ. ಈ ಮೂಲಕ ಅಕ್ರಮ ಹೋರ್ಡಿಂಗ್ ಹಾಕೊದವರ ವಿರುಧ್ಧ ಕ್ರಮ ಕೈಗೊಳ್ಳಲಾಗುತ್ತೆ.
ಸಿಜೆ: ಈ ತಿಂಗಳ ಒಳಗೆ ಫ್ಲೆಕ್ಸ್ ಸಮಸ್ಯೆ ಬಗೆಹರಿಯಬೇಕು. ಅಧಿಕಾರಿಗಳು ಯಾಕೆ ಕೆಲಸ ಮಾಡಲ್ಲ ಹೇಳಿ..? ಹೈಕೋರ್ಟ್ ಒತ್ತಡ ಹಾಕಿದ ಮೇಲೆ ಕೆಲಸ ಮಾಡ್ತಾ ಇದ್ದೀರಿ ಎಂದು ಪಾಲಿಕೆ ಆಯುಕ್ತ ಹಾಗು ವಕೀಲರಿಗೆ ಸಿಜೆ ತರಾಟೆ.

ಅಲ್ಲದೇ ಈ  ತಿಂಗಳ ಒಳಗೆ ಫ್ಲೆಕ್ಸ್​​ ಸಮಸ್ಯೆ ಬಗೆಹರಿಬೇಕು ಎಂದು ಕಟ್ಟು ನಿಟ್ಟಾಗಿ ಆದೇಶಿಸಿದ ಸಿಜೆ, ಅಧಿಕಾರಿಗಳು ಯಾಕೆ ಕೆಲಸ ಮಾಡಲ್ಲ ಹೇಳಿ..? ಹೈಕೋರ್ಟ್ ಒತ್ತಡ ಹಾಕಿದ ಮೇಲೆ ಕೆಲಸ ಮಾಡ್ತಾ ಇದ್ದೀರಿ ಅಂತಾ ಪಾಲಿಕೆ ಆಯುಕ್ತ ಹಾಗು ವಕೀಲರಿಗೆ ಸಿಜೆ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೇ, ಫ್ಲೆಕ್ಸ್​ ತೆರವು ಮಾಡಲು ನಿಮಗೆಷ್ಟು ಸಮಯ ಬೇಕು ಹೇಳಿ, ಬೇಗ ಕೆಲಸ ಮಾಡಿ‌ಮುಗಿಸಿ. ಈ ತಿಂಗಳಲ್ಲಿ ಪ್ಲೆಕ್ಸ್ ಹೋರ್ಡಿಂಗ್ ಸಮಸ್ಯೆ ಗೆ ಅಂತ್ಯ ಕಾಣಿಸಬೇಕು ಎಂದು ಸಿಜೆ ಖಡಕ್ ಆಗಿ ಹೇಳಿದ್ದಾರೆ. ನೀವು ಏನ್ ಕೆಲಸ ಮಾಡಿದ್ದೀರಿ ಎಂದು ದಾಖಲೆಗಳು ಹೇಳುತ್ತಿವೆ ಎಂದು ಹೇಳಿದ ಸಿಜೆ ಪಾಲಿಕೆ ಕಾರ್ಯವೈಖರಿಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ರು. ಅಲ್ಲದೇ, 13ನೇ ತಾರೀಖಿನ ಒಳಗಡೆ ಎಫ್​ಐಆರ್ ದಾಖಲಾಗಿರುವ ಪ್ರಕರಣಗಳ ತನಿಖೆ ಮುಗಿಸಿ ಎಂದು ಆದೇಶಿಸಿ, ವಿಚಾರಣೆಯನ್ನು ಆಗಸ್ಟ್ 14 ಕ್ಕೆ ಮುಂದೂಡಿದರು.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv