ಕಂಪ್ಲಿ ಗಣೇಶ್​ಗೆ ಹೈಕೋರ್ಟ್​ ಏಕ ಸದಸ್ಯ ಪೀಠದಿಂದ ಜಾಮೀನು

ಬೆಂಗಳೂರು: ಕಂಪ್ಲಿ ಶಾಸಕ ಜಿಎನ್​ ಗಣೇಶ್​ಗೆ ಕೊನೆಗೂ ಜಾಮೀನು ದೊರೆತಿದೆ. ಬಳ್ಳಾರಿಯ ವಿಜಯನಗರ ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಫೆಬ್ರವರಿ 21 ರಿಂದ ಜೈಲು ವಾಸದಲ್ಲಿದ್ದ ಕಂಪ್ಲಿ ಗಣೇಶ್​ಗೆ ಹೈಕೋರ್ಟ್​ ಏಕ ಸದಸ್ಯ ಪೀಠ ಷರತ್ತು ಬದ್ಧ  ಜಾಮೀನು ಮಂಜೂರು ಮಾಡಿದೆ. ಈಗಲ್​ಟನ್​ ರೆಸಾರ್ಟ್​ನಲ್ಲಿ ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದ ಗಣೇಶ್​ರನ್ನ ಫೆಬ್ರವರಿ 20 ರಂದು ಅಹಮದಾಬಾದ್​ನಲ್ಲಿ ಬಂಧಿಸಲಾಗಿತ್ತು. ನಂತರ ಗಣೇಶ್​ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು. ಇದನ್ನ ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿ ಹೈ ಕೋರ್ಟ್​ ಎರಡೂ ಕಡೆಯ ವಕೀಲರ ವಾದ ಆಲಿಸಿ ಆದೇಶವನ್ನ ಕಾಯ್ದಿರಿಸಿತ್ತು.

ಗಣೇಶ್ ಪರ ಜಾಮೀನು ನೀಡುವಂತೆ ವಾದ ಮಂಡಿಸಿದ ಬಿ.ವಿ.ಆಚಾರ್ಯ, ಗಲಾಟೆ ನಡೆದಿರುವುದನ್ನ ಆರೋಪಿ ನಿರಾಕರಿಸುತ್ತಿಲ್ಲ. ಆದರೆ ಗಲಾಟೆ ಆತ್ಮರಕ್ಷಣೆಗಾಗಿ ನಡೆದ ಘಟನೆಯಷ್ಟೇ. ಇದು ಪೂರ್ವಯೋಜಿತ ಹಲ್ಲೆಯಾಗಿಲ್ಲ. ಮೊದಲಿಗೆ ಆನಂದ್ ಸಿಂಗ್​ ಅವರೇ ಸ್ವತಃ ಹಲ್ಲೆ ನಡೆಸಿದ್ದರು. ಆತ್ಮರಕ್ಷಣೆಗಾಗಿ ಗಣೇಶ್ ಪ್ರತಿದಾಳಿ ನಡೆಸಿದ್ದಾರೆ. ಘಟನೆ ನಡೆದ ಮೇಲೆ ಅಲ್ಲಿದ್ದ ಇತರೆ ಶಾಸಕರು ದೂರು ನೀಡಿಲ್ಲ. ಆಸ್ಪತ್ರೆ ಸಿಬ್ಬಂದಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರಿನಲ್ಲಿ ಹೂಕುಂಡ, ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ ಅಂತಾ ಆರೋಪ ಮಾಡಿದ್ದಾರೆ. ಹೀಗಾಗಿ ಇದು ಪೂರ್ವಸಿದ್ಧತೆಯೊಂದಿಗೆ ನಡೆದ ಘಟನೆಯಲ್ಲ. ಸಚಿವರು, ಶಾಸಕರೇ ಘಟನೆಯ ಸಾಕ್ಷಿಗಳಾಗಿದ್ದಾರೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಸಾಧ್ಯವೇ ಇಲ್ಲ. ಈ ಆಧಾರದ ಮೇಲೆ ಕಂಪ್ಲಿ ಗಣೇಶ್​ಗೆ ಜಾಮೀನು ನೀಡಬೇಕಾಗಿದೆ ಅಂತಾ ಬಿ.ವಿ.ಆಚಾರ್ಯ ಮನವಿ ಮಾಡಿದ್ದರು.

ಇದಕ್ಕೆ ಜಾಮೀನು ನೀಡದಂತೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲ ಚಂದ್ರಮೌಳಿ, ಉದ್ದೇಶಪೂರ್ವಕ ಹಲ್ಲೆ ಎನ್ನವುದಕ್ಕೆ ಸಾಕ್ಷಿಗಳಿವೆ. ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಕೋರ್ಟ್​ಗೆ ಸಲ್ಲಿಸಲಾಗಿದೆ. ಅರೋಪಿ ಎಂಎಲ್ಎ ಆಗಿರುವುದಿಂದ ಪ್ರಭಾವಶಾಲಿಯಾಗಿದ್ದಾರೆ. ಜಾಮೀನು ನೀಡಿದ್ರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೇ ಗನ್ ಕೊಡಿ ಮುಗಿಸುತ್ತೆನೆ ಎಂದಿರುವುದಕ್ಕಕೂ ಸಾಕ್ಷಿ ಇದೆ. ಜೊತೆಗೆ ವಿಕ್ಟೀಮ್ ಹೊರ ಬಂದ್ರೆ ಅವರ ಜೀವಕ್ಕೆ ಭಯವಿದೆ ಎಂದಿದ್ದಾರೆ ಅಂತಾ ವಾದಿಸಿದ್ರು. ವಾದ ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv