ವೈರಲ್​​ ಆಗ್ತಿರೋ JCB ಮೀಮ್​​​ಗಳ ಹಿಂದಿನ ಕಾರಣ ಇಲ್ಲಿದೆ

ಸೋಷಿಯಲ್​ ಮೀಡಿಯಾದಲ್ಲಿ ದಿನಕ್ಕೊಂದು ಫೋಟೋ ಅಥವಾ ವಿಡಿಯೋ ಟ್ರೋಲ್ ಆಗುತ್ತಲೇ ಇರುತ್ತವೆ. ಹಾಗೇ ಮೀಮ್​ಗಳಿಗೆ ಕಡಿಮೆ ಇಲ್ಲ. ಕೆಲವೊಮ್ಮೆ ಎಷ್ಟೋ ಜನರಿಗೆ ಆ ಟ್ರೋಲ್​ ಅಥವಾ ಮೀಮ್​ಗಳ ಹಿಂದಿನ ಕಾರಣವೇ ಗೊತ್ತಿರಲ್ಲ. ನಿನ್ನೆಯಿಂದ ಜೆಸಿಬಿ ಮೀಮ್​​ಗಳು, ಟ್ವಿಟರ್​, ಫೇಸ್​​ಬುಕ್, ಇನ್ಸ್​ಟಾಗ್ರಾಂ ತುಂಬಾ ಹರಿದಾಡ್ತಿದೆ. ಆದ್ರೆ ಈ ಮೀಮ್​​ಗಳು ಇಷ್ಟೊಂದು ವೈರಲ್​​ಆಗ್ತಿರೋದ್ಯಾಕೆ ಅಂತ ಕೆಲವರು ತಲೆಗೆ ಹುಳ ಬಿಟ್ಕೊಂಡಿದ್ದಾರೆ. ನೀವೂ ಆ ಬಗ್ಗೆ ಯೋಚಿಸ್ತಿದ್ರೆ, ಅದಕ್ಕೆ ಉತ್ತರ ಇಲ್ಲಿದೆ.

ನಿನ್ನೆಯಿಂದ ಜೆಸಿಬಿ ಕೀ ಖುದಾಯಿ( ಜೆಸಿಪಿ ಅಗೆಯುವುದು) ಅನ್ನೋ ಹ್ಯಾಶ್​​ಟ್ಯಾಗ್ ಟ್ವಿಟರ್​​ನಲ್ಲಿ​​ ಟ್ರೆಂಡ್​ ಆಗ್ತಿದೆ. ಜೆಸಿಬಿಯ ಫುಲ್​ ಫಾರ್ಮ್​​ ಜೆ.ಸಿ.ಬ್ಯಾಮ್​ಫಾರ್ಡ್​​ ಎಕ್ಸ್​​​ಕವೇಟರ್ಸ್​ ಲಿಮಿಟೆಡ್​​. ಆದ್ರೆ ಈ ಸಂಸ್ಥೆಗೂ ಈ ಮೀಮ್​ಗಳಿಗೂ ಸಂಬಂಧವೇ ಇಲ್ಲ. ಯೂಟ್ಯೂಬ್​​​ನಲ್ಲಿ ಜೆಸಿಬಿಗೆ ಸಂಬಂಧಿಸಿದ ವಿಡಿಯೋಗಳು ಲಕ್ಷಗಟ್ಟಲೇ ವ್ಯೂವ್ಸ್​​ ಪಡೆದಿರೋದನ್ನ ಟ್ವಿಟರ್​​ ಬಳಕೆದಾರರೊಬ್ಬರು ನೋಡಿದ್ದರು. ಇದರಿಂದ ಆಶ್ಚರ್ಯಗೊಂಡು ಅದರ ಸ್ಕ್ರೀನ್​​ಶಾಟ್​​ವೊಂದನ್ನ ಅವರು ಶೇರ್​ ಮಾಡಿದ್ದರು. ಅಲ್ಲಿಂದ ಟ್ರೋಲ್​​ ಹಾಗೂ ಮೀಮ್​ಗಳು ಶುರುವಾಗಿವೆ.

ಜೆಸಿಬಿ ಮಣ್ಣು ಅಗೆಯೋ ವಿಡಿಯೋಗಳಿಗೆ ಇಷ್ಟು ವ್ಯೂವ್ಸ್​ ಬಂದಿದೆ ಅಂದ್ರೆ, ಜನ ಆ ಮಟ್ಟಿಗೆ ಕೆಲಸವಿಲ್ಲದೆ ಕೂತಿರ್ತಾರಾ ಅನ್ನೋದನ್ನ ಅಣಕ ಮಾಡಲು ಈ ಮೀಮ್​​ಗಳನ್ನ ಮಾಡಲಾಗಿದೆ. ಜನ ತಮ್ಮ ಕ್ರಿಯೇಟಿವಿಟಿ ಬಳಸಿ ವಿವಿಧ ರೀತಿಯಲ್ಲಿ ಮೀಮ್​ಗಳನ್ನ ಮಾಡಿದ್ದು, ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv