ನೀವು ಇಂಡಿಯನ್ ಟೀಮ್​​​ಗೆ ಆಡ್ಬೇಕಾ..? ಹಾಗಾದ್ರೆ ಈ 6 ಟೆಸ್ಟ್ ಪಾಸಾಗಿ​​​​..!

ಸದ್ಯ ಭಾರತೀಯ ಕ್ರಿಕೆಟ್​ನಲ್ಲಿ ಫಿಟ್ನೆಸ್​​​​​​​​​​​​​ನದ್ದೇ ಚಿಂತೆ. ಫಾರ್ಮ್​ಗಿಂತ ಫಿಟ್ನೆಸ್ ಬಹಳ ಮಹತ್ವ ಪಡೆದಿದೆ. ಟೀಂ ಇಂಡಿಯಾಗೆ ಸೆಲೆಕ್ಟ್ ಆಗಬೇಕಾದ್ರೆ ಮೊದಲು ಈ 6 ಫಿಟ್ನೆಸ್ ಸಾಬೀತು ಪಡಿಸಲೇಬೇಕು. ಹಾಗಾದ್ರೆ ಆ 6 ಫಿಟ್ನೆಸ್​​​​​​​ ಟೆಸ್ಟ್​​​ಗಳಾವುವು ಅಂತೀರಾ..?ಇಲ್ಲಿವೆ ನೋಡಿ.

ಟೆಸ್ಟ್ ನಂ 01- ಏರೋಬಿಕ್ ಟೆಸ್ಟ್ 
ಆಟಗಾರರಿಗೆ ಮೊದಲ ಟೆಸ್ಟ್ ಅಂದ್ರೆ ಅದು ಏರೋಬಿಕ್ ಫಿಟ್ನೆಸ್. ಈ ವ್ಯಾಯಾಮ ಮಾಡುವುದರಿಂದ ಸೂರ್ಯನ ಕೆಳಗೆ ದಿನವಿಡೀ ಆಡುವ ಸಮಯದಲ್ಲಿ ಶಾಖದ ಒತ್ತಡವನ್ನು ತಡೆದುಕೊಳ್ಳಬಹುದು. ಇದರಿಂದ ಆಯಾಸವನ್ನೂ ಸಹ ಕಡಿಮೆ ಮಾಡುತ್ತದೆ. ಹಾಗಾಗಿ ಏರೋಬಿಕ್ ವ್ಯಾಯಾಮ ಮಾಡೋದ್ರಿಂದ ದಿನವಿಡೀ ಬಿಸಿಲಿನಲ್ಲಿ ಆಡುವಾಗ ಆಗುವ ಆಯಾಸವನ್ನ ತಡೆಯಬಲ್ಲದು.
ಟೆಸ್ಟ್ ನಂ 02- ಫ್ಲೆಕ್ಸಿಬಿಲಿಟಿ 
ಫ್ಲೆಕ್ಸಿಬಿಲಿಟಿ ಹೆಚ್ಚಿಸುವ ವ್ಯಾಯಾಮಗಳನ್ನ ಮಾಡೋದ್ರಿಂದ ಸ್ನಾಯುಗಳು ಸಡಿಲವಾಗುತ್ತೆ ಜೊತೆಗೆ ಶಕ್ತಿ ಕೂಡ ಹೆಚ್ಚುತ್ತೆ. ಇದ್ರಿಂದ ದೇಹಕ್ಕೆ ಫೆಕ್ಸಿಬಿಲಿಟಿ ಬರುತ್ತೆ. ಅಷ್ಟೇ ಅಲ್ಲದೇ ಕ್ರಿಕೆಟ್​ ಆಡಲು ಕಾನ್‌ಫಿಡೆನ್ಸ್‌ ಬರುತ್ತೆ. ಕ್ವೀಕ್​​​​​​​ ಆಗಿ ಬರೋ ಬಾಲ್​​​​ ಅನ್ನ ತಡೆಯಲು​​​​ ಹಿಡಿಯಲು ಈ ಫ್ಲೆಕ್ಸಿಬಿಲಿಟಿ ಬೇಕೇ ಬೇಕು.
ಟೆಸ್ಟ್ ನಂ 03-  ಸ್ಟ್ರೆಂಥ್ ಆ್ಯಂಡ್ ಪವರ್
ಯೆಸ್..ಓರ್ವ ಕ್ರಿಕೆಟಿಗನಿಗೆ ಸ್ಟ್ರೆಂಥ್ ಆ್ಯಂಡ್ ಪವರ್ ಅತ್ಯಂತ ಮುಖ್ಯವಾದದ್ದು. ಬಿಗ್​​ ಶಾಟ್​​​​​​​​ಗಳನ್ನ ಹೊಡೆಯಬೇಕಂದ್ರೆ ಸ್ಟ್ರೆಂಥ್ ಆ್ಯಂಡ್ ಪವರ್ ಅತ್ಯವಶ್ಯ. ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಜಿಮ್​​​​ ಮಾಡ್ತಾರೆ. ಆದ್ರೆ ಇವರು ಅತಿ ಹೆಚ್ಚು ಭಾರವಿರೋ ವೇಟ್​​​​​​ಲಿಫ್ಟಿಂಗ್ ಎತ್ತಿ ಸ್ಟ್ರೆಂಥ್ ಆ್ಯಂಡ್ ಪವರ್ ಹೆಚ್ಚಿಸಿಕೊಳ್ತಾರೆ. ಇದ್ರಿಂದ ಇವರಿಗೆ ಬಿಗ್ ಶಾಟ್ ಹೊಡೆಯಲು ನೆರವಾಗಿದೆ.
ಟೆಸ್ಟ್ ನಂ 04- ಬಾಡಿ ಫ್ಯಾಟ್
ಬಾಡಿ ಫ್ಯಾಟ್ ಅಂದ್ರೆ ದೇಹದ ಕೊಬ್ಬಿನಾಂಶ. ಇದು ಕ್ರಿಕೆಟರ್ಸ್​​​​ಗಳ ದೇಹದಲ್ಲಿ ಕೊಬ್ಬಿನ ಶೇಕಡಾವಾರು ಹೆಚ್ಚಳವಾಗಿರಬೇಕು. ಆಗಿದ್ದಾಗ ಮಾತ್ರ ಕ್ರಿಕೆಟರ್ಸ್​​​​ಗಳಿಗೆ ಮುಕ್ತವಾಗಿ ಆಡಲು ಎನರ್ಜಿ ಸಿಗುತ್ತೆ. ಇದ್ರಿಂದ ಕ್ರಿಕೆಟರ್ಸ್​​ಗಳ ದೇಹದಲ್ಲಿ ಶೇಕಡವಾರು ಪ್ರಮಾಣ ಕೊಬ್ಬಿನಾಂಶ ಇರಲೇಬೇಕು. ಇದಕ್ಕಾಗಿ ಬೇಕಾದ ಎಕ್ಸರ್ಸೈಜ್ ಹಾಗೂ ಆಹಾರ ಬೇಕು.
ಟೆಸ್ಟ್ ನಂ 5- ಬ್ಯಾಲೆನ್ಸ್
ಕ್ರಿಕೆಟ್​​​​​ನಲ್ಲಿ ಮೋಸ್ಟ್​​​​ ಇಂಪಾರ್ಟೆಂಟ್ ಅಂದ್ರೆ ಅದು ಬ್ಯಾಲೆನ್ಸ್. ಯಾವುದೇ ಒಂದು ಕೆಲಸ ಮಾಡ್ಬೇಕು ಅಂದ್ರೆ ಒಂದು ಬ್ಯಾಲೆನ್ಸ್​​​ ಮೇಲೆ ಮಾಡಿ ಅಂತಾರೆ. ಅದ್ರಂತೆ ಈ ಬ್ಯಾಲೆನ್ಸ್​​​ ಇದ್ರೆ ಸ್ಟಂಪಿಂಗ್ ಆಗುವುದನ್ನ ತಪ್ಪಿಸಿಕೊಳ್ಳಬಹುದು. ಹಾಗೂ ಬೌಂಡರಿ ಲೈನ್​​​​​​ನಲ್ಲಿ ಒಂದು ಕ್ಯಾಚ್​​​​​​ ಹಿಡಿಬೇಕಂದ್ರೆ ಬ್ಯಾಲೆನ್ಸ್​​​​​​​ ಮುಖ್ಯ. ಇನ್ನೇನು ಬಾಲ್ ಬೌಂಡರಿಯೊಳಗೆ ಬೀಳುತ್ತೆ ಎನ್ನುವಷ್ಟರಲ್ಲಿಯೇ ಬ್ಯಾಲೆನ್ಸ್​​​ ಮಾಡಿ ಬಾಲ್​​​ ಅನ್ನ ಹಿಡಿಬೇಕಾಗುತ್ತೆ. ಹಾಗಾಗಿ ಬ್ಯಾಲೆನ್ಸ್ ಕ್ರಿಕೆಟ್ ಪ್ಲೇಯರ್ಸ್​​​​​​ಗೆ ಬಹಳ ಮುಖ್ಯ.
ಟೆಸ್ಟ್ ನಂ 06- ಚುರುಕುತನ ಮತ್ತು ವೇಗ
ಚುರುಕುತನ ಮತ್ತು ವೇಗ ಕ್ರಿಕೆಟರ್ಸ್​​ಗಳಿಗೆ ಇರುವುದು ಮಸ್ಟ್. ಎಷ್ಟು ಚುರುಕುತನ ಮತ್ತು ವೇಗ ಇರ್ಬೇಕು ಅಂದ್ರೆ 30 ಯಾರ್ಡ್ ಸರ್ಕಲ್​​​ನಲ್ಲಿ ಒಂದು ರನ್​​​​​​​​​ ಆಗುವುದರಲ್ಲಿ ಡಬಲ್​​​​​​​​​​​​​​​​ ರನ್​​​ ಕದಿಬೇಕು. ಇನ್ನು ಡಬಲ್ ರನ್​​​ ಇದ್ದಲ್ಲಿ 3 ರನ್​​​​ ಕದಿಯೊಷ್ಟು ವೇಗ ಮತ್ತು ಚುರುಕುತನ ಇರಲೇ ಬೇಕು. ಇಂತರದಲ್ಲಿ ಧೋನಿ ಹಾಗೂ ಕೊಹ್ಲಿ ಮಾಸ್ಟರ್ಸ್. 30 ಯಾರ್ಡ್ ಸರ್ಕಲ್​​​ನಲ್ಲಿ ಕೊಹ್ಲಿ ಮತ್ತು ಧೋನಿ ರನ್​​ ಕದಿಯುವುದರಲ್ಲಿ ಪಂಟರ್​​ಗಳು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv