ಬೇಸಿಗೆಯಲ್ಲಿ ಮೈಮನ ತಣಿಸೋ ಹರ್ಬಲ್ ಸ್ನಾನ

ಹಿಂದಿನ ಕಾಲದಿಂದಲೂ ಗಿಡ ಮೂಲಿಕೆಗಳನ್ನ ಬಳಸಿ ಮಾಡುವ ಹರ್ಬಲ್ ಸ್ನಾನ ಭಾರತದಲ್ಲಿ ಪ್ರಚಲಿತದಲ್ಲಿದೆ. ಆರೋಗ್ಯ ಹಾಗೂ ಯೌವ್ವನವನ್ನ ಕಾಪಿಟ್ಟುಕೊಳ್ಳಲು ಬಲು ಸಹಾಯಕಾರಿ ಇದು. ಅದ್ರಲ್ಲೂ ಬಿರುಬೇಸಿಗೆಯ ಕಿರಿಕಿರಿಗೆ ಹರ್ಬಲ್ ಸ್ನಾನ ಉತ್ತಮ ಫಲಿತಾಂಶ ನೀಡಿ ಮೈಮನವನ್ನ ಅರಳಿಸುತ್ತೆ. ಕೆಲಸದಿಂದ ದಣಿದು ಬಂದಾಗ ಒಮ್ಮೆ ಹರ್ಬಲ್ ಸ್ನಾನ ಮಾಡಿ ನೋಡಿ. ರಿಶ್ರೆಫ್ ಆಗ್ತೀರ..!

1.ಜೇನುತುಪ್ಪ ಹಾಗೂ ವಿನೆಗರ್ ಸ್ನಾನ
ಬೇಸಿಗೆಯಲ್ಲಿ ಪದೇ ಪದೇ ಸ್ನಾನ ಮಾಡಬೇಕು ಅನ್ನೋ ಕಿರಿಕಿರಿಯಾಗ್ತಿದ್ರೆ, ಅತಿಯಾದ ಬೆವರು, ಬಳಲಿಕೆ ಇದ್ರೆ ಹೀಗೆ ಮಾಡಿ. 1 ದೊಡ್ಡ ಬಕೆಟ್‌ ನೀರಿಗೆ 1 ಕಪ್ ವಿನೆಗರ್ ಸೇರಿಸಿ, 1 ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಈ ನೀರಲ್ಲಿ ಸ್ನಾನ ಮಾಡಿದ್ರೆ ದೇಹ ತಂಪಾಗಿ ಹಗುರಾಗುತ್ತೆ.

2. ರೋಸ್ ಆಯಿಲ್ ಹಾಗೂ ಹನಿ
ಬಿರುಬಿಸಿಲಿಗೆ ಕಪ್ಪಿಟ್ಟ ಚರ್ಮ ಮತ್ತೆ ಮೊದಲಿನಂತಾಗಬೇಕು. ಸನ್ ಟ್ಯಾನ್ ಹೋಗಬೇಕು ಅಂದ್ರೆ ಸ್ನಾನ ಮಾಡುವ ನೀರಿನ 1 ಟಬ್‌ ಅಥವಾ ಬಕೆಟ್‌ಗೆ ಈ ಸಾಮಗ್ರಿಗಳನ್ನ ಸೇರಿಸಿ ಸ್ನಾನ ಮಾಡಿ.
⦁ 3 ಟೇಬಲ್‌ ಸ್ಪೂನ್ ಆಲಿವ್ ಆಯಿಲ್
⦁ 2 ಟೇಬಲ್ ಸ್ಪೂನ್ ರೋಸ್ ಆಯಿಲ್
⦁ 2 ಟೇಬಲ್ ಸ್ಪೂನ್ ಜೇನುತುಪ್ಪ

3. ಹರ್ಬಲ್ ಬಾಡಿ ಸ್ಕ್ರಬ್
ಸ್ನಾನ ಮಾಡುವ ನೀರಿನ ಜೊತೆಗೆ ಗಿಡಮೂಲಿಕೆಗಳಿಂದ ಅಥವಾ ಮನೆಯಲ್ಲೇ ಸಿಗೋ ಸಾಮಗ್ರಿಗಳಿಂದ ಅದ್ಭುತವಾದ ಬಾಡಿ ಸ್ಕ್ರಬ್ ತಯಾರು ಮಾಡಬಹುದು. ಸಮ್ಮರ್‌ಗೆ ಸ್ಪೆಷಲ್ ಹರ್ಬಲ್ ಬಾಡಿ ಸ್ಕ್ರಬ್‌ನ ಹೀಗೆ ತಯಾರಿಸಿಕೊಳ್ಳಿ
⦁ 2 ಕಪ್ ಒಣಗಿದ ಬಟಾಣಿ ಕಾಳಿನ ಪುಡಿ
⦁ 1 ಕಪ್ ಹೆಸರಿಟ್ಟು
⦁ 1 ಕಪ್ ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿ
⦁ 1 ಕಪ್ ನಿಂಬೆ ಸಿಪ್ಪೆಯ ಪುಡಿ
⦁ 1 ಕಪ್ ಬಾದಾಮಿ ಪುಡಿಎಲ್ಲವನ್ನೂ ಸೇರಿಸಿ ಹದವಾಗಿ, ಸ್ವಲ್ಪ ತರಿತರಿಯಾಗಿರುವಂತೆ ರುಬ್ಬಿಕೊಳ್ಳಿ ಬಾಟಲ್‌ನಲ್ಲಿ ಶೇಖರಿಸಿಡಿ. ಸ್ನಾನ ಮಾಡುವಾಗ ಸ್ವಲ್ಪ ಪೌಡರ್​​ಗೆ ನೀರು ಸೇರಿಸಿ ಬಳಸಿ.

ಕನಿಷ್ಠ ವಾರಕ್ಕೆರೆಡು ಬಾರಿ ಹರ್ಬಲ್ ಸ್ನಾನ ಮಾಡಿದ್ರೆ ಮೈಮನಸ್ಸನ್ನ ಕೂಲ್‌ಕೂಲ್ ಆಗಿರಿಸಿಕೊಳ್ಳಬಹುದು. ಜೊತೆಗೆ ಹಲವು ಚರ್ಮ ರೋಗಗಳನ್ನೂ ನಿವಾರಿಸಿಕೊಳ್ಳಬಹುದು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv