ಕಟ್ಟಡ ಕುಸಿತ ಪ್ರಕರಣ: ಸಂತ್ರಸ್ತ ದಂಪತಿಗೆ ಮಹಿಳೆಯಿಂದ ಧನ ಸಹಾಯ

ಧಾರವಾಡ: ಕಟ್ಟಡ ಕುಸಿತ ಪ್ರಕರಣಕ್ಕೆ ಸಂಭಂದ ಪಟ್ಟಂತೆ ಪವಾಡ ಸದೃಶ್ಯವಾಗಿ ನಾಲ್ಕು ದಿನಗಳ ಬಳಿಕ ಅವಶೇಷಗಳಡಿ ಸಿಲುಕಿ ಬದುಕಿ ಬಂದ ದಂಪತಿಗಳಿಗೆ ಮಂಗಳಾ ಭಟ್ ಎಂಬುವರು ಮಾನವೀಯತೆ ದೃಷ್ಟಿಯಿಂದ 10 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದಾರೆ. ದಿಲೀಪ್ ಮತ್ತು ಸಂಗೀತಾ ಬದುಕಿ ಬಂದ ದಂಪತಿಯಾಗಿದ್ದು, ಇವರಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಮಂಗಳ ಭಟ್​ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ದಂಪತಿಗಳ ಆರೋಗ್ಯ ವಿಚಾರಿಸಿ ಸಹಾಯ ಧನ ಸಹಾಯ ಮಾಡಿದ್ದಾರೆ. ಅಂದ್ಹಾಗೆ, ಮಂಗಳಾ ಭಟ್ ಧಾರವಾಡದ ಸನ್ನದಿ ಮಹಿಳಾ ಸಂಘಟನೆಯ ಸದಸ್ಯೆಯಾಗಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv