ನಿಮ್ಮ ಮಕ್ಕಳ ಎಕ್ಸಾಂ ಸ್ಟ್ರೆಸ್​​​ ಕಡಿಮೆ ಮಾಡಲು ಹೀಗೆ ಮಾಡಿ..!

ಸ್ಟುಡೆಂಟ್​ ಲೈಫ್‌ನಲ್ಲಿ ಎಕ್ಸಾಂಗಳು ಭವಿಷ್ಯದ ಮಹತ್ವದ ಮೆಟ್ಟಿಲುಗಳು. ಪರೀಕ್ಷೆ ಅನ್ನೋ ಭಯದಲ್ಲಿ ತಲೆ ಕೆಡಿಸಿಕೊಳ್ಳೋರೇ ಹೆಚ್ಚು. ಸುಖಾ-ಸುಮ್ಮನೆ ಒಂಥರಾ ಕಿರಿಕಿರಿ. ಯಾಱರ ಮೇಲೋ ರೇಗಾಡೋದು, ಮಲಗಿದ್ರೂ ಸರಿಯಾಗಿ ನಿದ್ರೆ ಬಾರದೇ ಇರೋದು. ಊಟ ಬಿಡೋದು, ಆರೋಗ್ಯ ಹಾಳು ಮಾಡಿಕೊಳ್ಳೋದು ಎಕ್ಸಾಂ ಟೆನ್ಶನ್‌ನಲ್ಲಿ ಕಾಮನ್. ಈ ವರ್ಷದ ಫೈನಲ್​ ಎಕ್ಸಾಂಗೆ ಇನ್ನೇನು ಎರಡು ಮೂರು ತಿಂಗಳಷ್ಟೇ ಬಾಕಿ ಇದೆ. ನಿಮ್ಮ ಮಕ್ಕಳು ಎಕ್ಸಾಂ ಸ್ಟ್ರೆಸ್‌ನಿಂದ ಹೊರಬರಬೇಕು ಅಂದ್ರೆ ಅದಕ್ಕೆ ಸಿಂಪಲ್ ಟಿಪ್ಸ್‌ ಇಲ್ಲಿದೆ.

ಪೌಷ್ಟಿಕ ಆಹಾರ: ನಿಮ್ಮ ಮಗು ಸಮೃದ್ಧ ಪೋಷಕಾಂಶವಿರುವ ಆಹಾರ ಸೇವಿಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ತಾಜಾ ಹಣ್ಣುಗಳು, ತರಕಾರಿ, ಹಾಗೂ ನೀರಿನ ಅಂಶ ಹೆಚ್ಚಾಗಿರುವ ಆಹಾರ ನೀಡುವಲ್ಲಿ ಪೋಷಕರು ಗಮನ ಹರಿಸಬೇಕು. ಹೆಚ್ಚು ಕೊಬ್ಬಿನಂಶ ವಿರುವ ಆಹಾರ, ಹೆಚ್ಚು ಸಕ್ಕರೆ ಇರುವ ಪದಾರ್ಥ, ಬರ್ಗರ್‌, ಚಿಪ್ಸ್‌, ಸೋಡಾ, ಸಿಹಿತಿಂಡಿಗಳಂಥ ಆಹಾರಗಳಿಂದ ಮಕ್ಕಳನ್ನು ದೂರವಿಡಬೇಕು.

ಕಾಳಜಿ ಇರಲಿ: ಪರೀಕ್ಷೆ ಸಮಯದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರಿಗೆ ಕಾಳಜಿ ಇರಬೇಕು. ಮಕ್ಕಳು ಹೊತ್ತಿಗೆ ಸರಿಯಾಗಿ ನಿದ್ದೆ ಮಾಡುವಂತೆ ನೋಡಿಕೊಳ್ಳಿ. ಎಕ್ಸಾಂ ಟೈಮಲ್ಲಿ ಅಗತ್ಯವಾದಷ್ಟು ನಿದ್ದೆ ಮಾಡುವುದರಿಂದ ಏಕಾಗ್ರತೆ ಕಾಪಾಡಿಕೊಳ್ಳಲು ಸಾಧ್ಯ. ಎಕ್ಸಾಂ ವೇಳೆ ಮಕ್ಕಳು ರಾತ್ರಿ ಹೊತ್ತು ಕನಿಷ್ಟ 6-7 ಗಂಟೆಗಳ ಕಾಲ ಮಲಗಬೇಕು. ಪರೀಕ್ಷೆ ಮುನ್ನಾ ದಿನ ನಿಮ್ಮ ಮಕ್ಕಳನ್ನು ರಾತ್ರಿ ಇಡೀ ಓದುವಂತೆ ಒತ್ತಡ ಹೇರಬೇಡಿ.

ಮಕ್ಕಳು ಆ್ಯಕ್ಟಿವ್ ಆಗಿದ್ದಾರಾ ಗಮನಿಸಿ: ಎಕ್ಸಾಂ ಸಮಯದಲ್ಲಿ ಫಿಸಿಕಲ್ ಆ್ಯಕ್ಟಿವಿಟಿ ತುಂಬಾ ಮುಖ್ಯ. ಎಕ್ಸಸೈಜ್ ಮಕ್ಕಳನ್ನು ದೈಹಿಕವಾಗಿ ಆ್ಯಕ್ಟಿವ್ ಆಗಿಡಲು ಸಹಾಯ ಮಾಡುತ್ತದೆ. ಮಕ್ಕಳ ಸ್ಟ್ರೆಸ್‌ ಕಮ್ಮಿ ಮಾಡುತ್ತದೆ. ವಾಕಿಂಗ್, ಸೈಕ್ಲಿಂಗ್ , ಫುಟ್‌ಬಾಲ್, ಡ್ಯಾನ್ಸಿಂಗ್ ಎಲ್ಲಾ ಆ್ಯಕ್ಚಿವಿಟಿಸ್‌ ಪರೀಕ್ಷೆಯ ಸಮಯದಲ್ಲಿ ತುಂಬಾ ಪರಿಣಾಮ ಬೀರುತ್ತವೆ.

ಶೆಡ್ಯೂಲ್ ಇರಲಿ: ನಿಮ್ಮ ಮಗುವಿನ ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿ ನಿಮ್ಮ ಜತೆ ಇರಲಿ. ನಾಳೆ ಯಾವ ಎಕ್ಸಾಂ ಇದೆ. ಶೆಡ್ಯೂಲ್ ಯಾವ ರೀತಿ ಮಾಡಿಕೊಳ್ಳಬೇಕು, ಹೇಗೆ ಓದಬೇಕು ಎಂಬ ಬಗ್ಗೆ ಮಕ್ಕಳಿಗೆ ಸಹಾಯ ಮಾಡಿ. ನಿಮ್ಮ ಮಗು ಯಾವತ್ತಿದ್ದರೂ ನಿಮ್ಮ ಮಗುನೇ. ನಿಮ್ಮ ಮಕ್ಕಳನ್ನು ಬೇರೆ ವಿದ್ಯಾರ್ಥಿಗಳ ಜತೆ ಹೋಲಿಸಬೇಡಿ. ಮಕ್ಕಳಲ್ಲಿ ಧನಾತ್ಮಕ ಮನೋಭಾವ ಹಾಗೂ ಧೈರ್ಯವನ್ನು ತುಂಬಬೇಕಾದದ್ದು ಪೋಷಕರ ಜವಾಬ್ದಾರಿ. ಪರೀಕ್ಷೆ ಸಮಯದಲ್ಲಿ ಓದಿನ ಮಧ್ಯೆ ಅರ್ಧಗಂಟೆ ಕಾಲ ಮ್ಯೂಸಿಕ್ ಕೇಳಲು ಅಥವಾ ಟಿವಿ ನೋಡಲು ಅನುಮತಿ ನೀಡಿ.

ಆತಂಕ ದೂರ ಮಾಡಿ: ಪರೀಕ್ಷೆ ಬಗ್ಗೆ ಮಕ್ಕಳಲ್ಲಿ ಆತಂಕ ಮೂಡಿಸುವ ಜನರು ನಿಮ್ಮ ಸುತ್ತಮುತ್ತ ಇರುತ್ತಾರೆ. ಅಂತಹ ಜನರ ಜತೆ ನಿಮ್ಮ ಮಕ್ಕಳನ್ನು ದೂರವಿಡಿ. ಅವೆರಷ್ಟು ಕಡಿಮೆ ಅಧ್ಯಯನ ಮಾಡಿದ್ದಾರೆ. ಇವರೆಷ್ಟು ಮಾಡಿದ್ದಾರೆ ಎಂಬ ಹೋಲಿಕೆ ಹಾಗೂ ಸಲಹೆ ನಿಮ್ಮ ಮಕ್ಕಳು ರಾತ್ರಿ ಇಡೀ ಎಚ್ಚರದಿಂದ ಇರುವಂತೆ ಮಾಡಬಹುದು.

ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬೇಡಿ. ಇದ್ರಿಂದ ಮಕ್ಕಳು ಸಾಮಾನ್ಯವಾಗಿ ಕಠಿಣ ಅಧ್ಯಯನ ಮಾಡಲು ಮುಂದಾಗುತ್ತಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೇ, ಮಕ್ಕಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಪರೀಕ್ಷೆ ಒತ್ತಡದಿಂದ ನಿಮ್ಮ ಮಕ್ಕಳು ಆತಂಕ, ತೂಕ ಕಡಿಮೆಯಾಗುವುದು, ಖಿನ್ನತೆಗೆ ಒಳಗಾಗುವುದು, ಹಸಿವು ಆಗದಿರುವುದು ಮುಂತಾದ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಕೌನ್ಸೆಲರ್‌ ಭೇಟಿಯಾಗಲು ಹಿಂಜರಿಯದಿರಿ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv