ನಾಲ್ಕನೇ ಬಾರಿಗೆ ಹೆಬ್ಬಾಳ ಸೇತುವೆ ಮುಳುಗುವ ಭೀತಿಯಲ್ಲಿ ಕಾಫಿನಾಡು

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದೆ. ಕಳೆದ ರಾತ್ರಿಯಿಂದ  ಭಾರೀ ಮಳೆ ಸುರಿಯುತ್ತಿದ್ದು, ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳಸಾದ ಹೆಬ್ಬಾಳ ಸೇತುವೆ ಮುಳುಗುವ ಭೀತಿ ಎದುರಾಗಿದ್ದು, ಈ ವರ್ಷದಲ್ಲಿ ನಾಲ್ಕನೇ ಬಾರಿಗೆ ಸೇತುವೆ ಮಳುಗಡೆ ಸಾಧ್ಯತೆ ಹೆಚ್ಚಳವಾಗಿದೆ. ಒಂದು ವೇಳೆ, ಹೆಬ್ಬಾಳ ಸೇತುವೆ ಮುಳುಗಡೆಯಾದರೆ, ಕಳಸಾ ಹಾಗೂ ಹೊರನಾಡು ಸಂಪರ್ಕ ಕಡಿತಗೊಳ್ಳಲಿದೆ. ಶೃಂಗೇರಿ, ಕಳಸ, ಕುದುರೆಮುಖ, ಬಾಳೆಹೊನ್ನೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗೆ, ಭದ್ರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತುಂಗಾ ಉಕ್ಕಿ ಹರಿತ್ತಿರುವುದರಿಂದ ಗಾಂಧಿ ಮೈದಾನಕ್ಕೆ ನೀರು ನುಗ್ಗಿ, ಮೈದಾನ ಸಂಪೂರ್ಣ ಜಲಾವೃತಗೊಂಡಿದೆ. ನದಿಗಳ ಅಕ್ಕಪಕ್ಕದ ಜಮೀನು, ರಸ್ತೆಗಳು ಜಲಾವೃತವಾಗಿದ್ದು, ನದಿ ಪಾತ್ರದ ಜನರು ಆತಂಕದಲ್ಲಿ ಜೀವನ ಕಳೆಯುವಂತಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv