ರಸ್ತೆ ಮಧ್ಯೆ ಕೆಟ್ಟು ನಿಲ್ತು ಟ್ರಕ್..15 ಕಿ.ಮೀ.ವರೆಗೆ ಸಾಲಾಗಿ ನಿಂತವು ವೆಹಿಕಲ್ಸ್​..!

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರದ ರಸ್ತೆಯಲ್ಲಿ ಟ್ರಕ್ ಒಂದು ಕೆಟ್ಟು ನಿಂತಿದ್ದರಿಂದ, ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಳಗ್ಗೆ 7.30ರ ಸುಮಾರಿಗೆ ಟ್ರಕ್​​ ಕೆಟ್ಟು ನಿಂತಿದ್ರಿಂದ ಹೊಸೂರು ರೋಡ್ ಸಂಪೂರ್ಣ ಟ್ರಾಫಿಕ್​ ಜಾಮ್ ಆಗಿತ್ತು. ಸುಮಾರು 15 ಕಿಲೋ ಮೀಟರ್​ವರೆಗೆ ವಾಹನಗಳು ಸಾಲಾಗಿ ನಿಂತಿದ್ದವು. ಇದರಿಂದ ದಿನನಿತ್ಯದ ಕೆಲಸಗಳಿಗೆ ಹೋಗುವ ಜನರು ತೊಂದರೆ ಅನುಭವಿಸಿದರು. ಕೊನೆಗೆ ಟ್ರಾಫಿಕ್ ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದಿದ್ದಾರೆ.