ಕಾಫಿನಾಡು ಚಿಕ್ಕಮಗಳೂರಲ್ಲಿ ವರುಣನ ಆರ್ಭಟ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ ಮುಂದುವರಿದಿದೆ. ನಿನ್ನೆಯಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿದೆ. ಶೃಂಗೇರಿ, ಕೊಪ್ಪ, ಮೂಡಿಗೆರೆ, ಎನ್‌.ಆರ್.ಪುರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ತುಂಗಾ, ಭದ್ರಾ ನದಿಗಳು ತುಂಬಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಒಳಹರಿವು ಸಹ ಹೆಚ್ಚಾಗಿದೆ. ಶೃಂಗೇರಿಯ ಶಾರಾದಾಂಬೆಯ ದೇವಾಲಯದ ಬಳಿ ಇರುವ ಕಪ್ಪೆ ಶಂಕರನಾರಾಯಣ ದೇವಾಲಯ ಪೂರ್ತಿ ಮುಳುಗಡೆಯಾಗಿದೆ. ಗುರುಗಳ ಸಂಧ್ಯಾವಂದನೆ ಮಂಟಪ ಕೂಡಾ ಮುಳುಗಡೆಯಾಗಿದೆ. ಇನ್ನೂ ಶೃಂಗೇರಿ ದೇವಾಲಯಕ್ಕೆ ಹೋಗುವುದಕ್ಕೆ ಇದ್ದ ಮತ್ತೊಂದು ರಸ್ತೆ ಕೂಡಾ ಜಲಾವೃತವಾಗಿದೆ. ಗಾಂಧಿ ಮೈದಾನದಲ್ಲಿ ಕೂಡಾ ತುಂಗಾ ನದಿ ನೀರು ಆವರಿಸಿಕೊಂಡಿದೆ. ಇದರಿಂದ ನದಿ ಪಾತ್ರದ ಜನರು ಆತಂಕದಲ್ಲಿ ಜೀವನ ಕಳೆಯುವಂತಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv