ಉಡುಪಿಯಲ್ಲಿ ಮುಂದುವರಿದ ಮಳೆಯ ಆರ್ಭಟ

ಉಡುಪಿ: ಕಳೆದು ಒಂದು ವಾರದಿಂದ ನಿರಂತರವಾಗಿ ಉಡುಪಿಯಲ್ಲಿ ಮಳೆ ಸುರಿದಿತ್ತು. ನಿನ್ನೆ ಒಂದು ದಿನ ವಿಶ್ರಾಂತಿ ನೀಡಿದ ವರುಣ ಮತ್ತೆ ಸೋಮವಾರ ರಾತ್ರಿಯಿಂದ ತನ್ನ ಆರ್ಭಟ ಮುಂದುವರಿಸಿದ್ದಾನೆ. ಬೈಂದೂರು,ಹೆಬ್ರಿ,ಎಣ್ಣೆಹೊಳೆ ಕೊಲ್ಲೂರು ಭಾಗದಲ್ಲಿ ಮಳೆ ಬಿಡುವು ನೀಡದೆ ಸರಿಯುತ್ತಿದ್ದು, ಮಳೆಯಿಂದಾಗಿ ಸಮುದ್ರ ಅಬ್ಬರ ಕೊಂಚ ಬಿರುಸುಗೊಂಡಿದೆ. ಮಲ್ಪೆ, ಕಾಪು, ಉದ್ಯಾವರ, ಮಟ್ಟು ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದ ಕಡಲ್ಕೊರೆತ ಮುಂದುವರಿದಿದೆ. ನಾಡದೋಣಿ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv