ಮಳೆ, ಗಾಳಿ, ಚಳಿಗೆ ಹೈರಾಣಾದ ಕೊಡಗಿನ ಜನತೆ.

ಕೊಡಗು: ಕೊಡಗಿನಲ್ಲಿ ಮಳೆ ಮುಂದುವರಿದಿದೆ. ಇಂದಿನಿಂದ ಜಿಲ್ಲೆಯಾದ್ಯಂತ ಶಾಲಾ-ಕಾಲೇಜು ಪುನಾರಂಭಗೊಂಡಿದ್ದು, ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಮಳೆಯ ನಡುವೆ ವಿದ್ಯುತ್​ ಕಣ್ಣಾ-ಮುಚ್ಚಾಲೆಯಿಂದ ಗ್ರಾಮೀಣ ಭಾಗದ ಜನರು ಕಂಗೆಟ್ಟಿದ್ದಾರೆ. ಮಳೆಯ ಅಬ್ಬರಕ್ಕೆ ಹಲವೆಡೆ ವಿದ್ಯುತ್​ ಕಂಬಗಳು ನೆಲಕ್ಕುರುಳಿವೆ. ಭಾರೀ ಮಳೆ ಹಿನ್ನೆಲೆ ಭೂ ಕುಸಿತದಿಂದ ಬಂದ್ ಆಗಿದ್ದ, ತಿತಿಮತಿ ಹುಣಸೂರು ರಾಜ್ಯ ಹೆದ್ದಾರಿ ಲಘು ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ರಸ್ತೆಗೆ ಅಡ್ಡಲಾಗಿ ಭಾರೀ ಗಾತ್ರದ ಮರ ಉರುಳಿ ಬಿದ್ದಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv