ಮಳೆಯ ಆರ್ಭಟಕ್ಕೆ ಮನೆಯ ತಡೆಹೋಡೆ ಕುಸಿತ

ಕೊಡಗು: ನಿನ್ನೆ ರಾತ್ರಿ ಸುರಿದ ಮಳೆ ಅಬ್ಬರಕ್ಕೆ ಮನೆಯ ತಡೆಗೋಡೆ ಕುಸಿದ ಘಟನೆ, ಮಡಿಕೇರಿಯ ಸುಬ್ರಹ್ಮಣ್ಯ ನಗರದಲ್ಲಿ ನಡೆದಿದೆ. ಪರಮೇಶ್ವರ್ ಎಂಬುವರಿಗೆ ಸೇರಿದ ಮನೆಯ ತಡೆಗೋಡೆ ಸುಮಾರು ಮಧ್ಯರಾತ್ರಿ 1.30 ವೇಳೆಗೆ ಕುಸಿದಿದೆ. 50 ಅಡಿ ಉದ್ದ 18 ಅಡಿ ಎತ್ತರದ ಕಾಂಪೌಂಡ್ ಕುಸಿತದಿಂದ ಸುಬ್ರಹ್ಮಣ್ಯ ಮನೆ ಅಪಾಯದಂಚಿನಲ್ಲಿದೆ. ಅಲ್ಲದೇ, ಪಕ್ಕದ ಮನೆಗೂ ಹಾನಿಯಾಗಿದೆ. ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.