ಜಿಲ್ಲೆಯಾದ್ಯಂತ ಮುಂದುವರಿದ ಮಳೆಯ ಆರ್ಭಟ.!

ಹಾಸನ: ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದೆ. ಮಳೆಯ ಜೊತೆ ಗಾಳಿಯ ಆರ್ಭಟವೂ ಜೋರಾಗಿದ್ದು, ಮೊನ್ನೆ ಅಷ್ಟೇ ಮರ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ್ದರು. ಇಂದು ಕೂಡಾ ಮಳೆ ಯಾವುದೇ ಬ್ರೇಕ್​ ನೀಡದೇ ಎಡಬಿಡದೆ ಸುರಿಯುತ್ತಿದೆ.

ಇನ್ನೂ ಸಕಲೇಶಪುರ ತಾಲೂಕಿನಲ್ಲೂ ಮಳೆ ಮುಂದುವರೆದಿದ್ದು, ರಸ್ತೆಗೆ ಅಡ್ಡಲಾಗಿ ಬೃಹತ್​ ಗ್ರಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ಸಕಲೇಶಪುರದ ಬಾಗೆ ಸಮೀಪ ನಡೆದಿದೆ. ಇದರಿಂದ ಸಕಲೇಶಪುರ-ಬೆಳಗೋಡು- ಬೇಲೂರು ಮಾರ್ಗ ಬಂದ್​ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಶೀಘ್ರ ಮರ ತೆರವುಗೊಳಿಗೊಳಿಸುವಂತೆ  ವಾಹನ ಸವಾರರು ಅರಣ್ಯ ಇಲಾಖೆಯನ್ನುಒತ್ತಾಯಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:cantact@firstnews.tv