ಬಿಡುವು ಕೊಡದ ಮಳೆರಾಯ, ಮರ ಬಿದ್ದು ಪಾದಾಚಾರಿ ಸಾವು

ಹಾಸನ: ರಾಜ್ಯದಲ್ಲಿ ವರುಣ ಆರ್ಭಟಿಸುತ್ತಿದ್ದು ಜಿಲ್ಲೆಯಲ್ಲಿಯೂ ಮಳೆ ಬಿಡುವು ಕೊಡದೆ ಸುರಿಯುತ್ತಿದೆ. ಆದರೆ ಇಂದು ಮಳೆ ಜೊತೆಗೆ ಗಾಳಿಯೂ ಜೋರಾಗಿದ್ದು ಪರಿಣಾಮ‌ ಮರ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಳಲೆ‌ ಗ್ರಾಮದಲ್ಲಿ ಘಟನೆ ನಡೆದಿದೆ. ಪುಟ್ಟಯ್ಯ(60) ಮೃತ ವ್ಯಕ್ತಿ. ಮನೆಯಿಂದ ಸಂತೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಈ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv