ಮಲೆನಾಡ ಹೆಬ್ಬಾಗಿಲಲ್ಲಿ ಭಾರೀ ಮಳೆ:ಭೂಕುಸಿತ…!

ಶಿವಮೊಗ್ಗ : ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಭೂಮಿ ಕುಸಿದು ಮನೆಗೆ ನೀರು ಹಾಗೂ ಮಣ್ಣು ನುಗ್ಗಿದ ಘಟನೆ ಹೊಸನಗರ ತಾಲೂಕು ನಿಟ್ಟೂರಿನಲ್ಲಿ ನಡೆದಿದೆ. ಮಳೆಯ ಅವಾಂತರಕ್ಕೆ ಹೊಸನಗರ, ಕೊಲ್ಲುರು ರಸ್ತೆ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಮಳೆ ಸಹಿತ ಭಾರೀ ಗಾಳಿಗೆ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ರಾಜೇಶ್ ಹಾಗೂ ಅಶೋಕ್ ಎಂಬುವವರ ಮನೆಯ ಹಿಂಬದಿಯಲ್ಲಿ ಧರೆ ಕುಸಿದು ಮನೆಯ ಒಳಗೆ ಮಣ್ಣು ನುಗ್ಗಿದ ಘಟನೆಯೂ ನಡೆದಿದೆ. ಸ್ಥಗಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ಮರು ಜೋಡಣೆ ಮಾಡುತ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv