ಕಲಬುರ್ಗಿಯಲ್ಲಿ ಭಾರಿ ಮಳೆ, ನೆಲಕಚ್ಚಿದ ಬಾಳೆ ತೋಟ..!

ಕಲಬುರ್ಗಿ: ಈಗಾಗಲೇ ರಾಜ್ಯಕ್ಕೆ ಮುಂಗಾರು ಕಾಲಿಟ್ಟಿದ್ದು ವರುಣ ಅಬ್ಬರಿಸ್ತಿದ್ದಾನೆ. ಈ ಮೂಲಕ ಪ್ರಭಲ ಮುಂಗಾರಿನ ಸೂಚನೆ ನೀಡಿದ್ದಾನೆ. ಇನ್ನು ತೊಗರಿನಾಡು ಕಲಬುರ್ಗಿಯಲ್ಲಿ ವರುಣ ತನ್ನ ರುದ್ರನರ್ತನವನ್ನೇ ತೋರಿದ್ದು, ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ತಾಲೂಕಿನ ಶ್ರೀನಿವಾಸ ಸರಡಗಿ‌ ಸೇರಿ ಹಲವೆಡೆ ಬಾಳೆ ತೋಟ ಹಾನಿಯಾಗಿದೆ. ನೂರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದಿದ್ದ ಬಾಳೆ ಗಿಡಗಳು ನೆಲಕಚ್ಚಿಹೋಗಿವೆ. ಇದರಿಂದ ಕಂಗಾಲಾದ ರೈತರು ಹಾನಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಬಾಳೆ ಹಾನಿ ಬಗ್ಗೆ ಸಮೀಕ್ಷೆಗೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv