ಬಿಸಿಲುನಾಡಲ್ಲಿ ಮುಂದುವರೆದ ವರುಣನ ಅಬ್ಬರ..!

ರಾಯಚೂರು: ರಾಜ್ಯದಾದ್ಯಂತ ವರುಣನ ಅಬ್ಬರ ಜೋರಾಗಿದೆ. ಬಿಸಿಲುನಾಡು ರಾಯಚೂರಿನಲ್ಲೂ ವರುಣ ಜೋರಾಗಿಯೇ ಅಬ್ಬರಿಸ್ತಿದ್ದಾನೆ. ಕೆಲ ದಿನಗಳಿಂದ ಲಿಂಗಸುಗೂರು ತಾಲ್ಲೂಕಿನಾದ್ಯಂತ ಭಾರಿ ಮಳೆಯಾಗುತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಇಂದು ಬೆಳಗ್ಗೆಯಿಂದ ತಾಲುಕಿನಾದ್ಯಂತ ಸುರಿದ ಮಳೆಗೆ ಲಿಂಗಸುಗೂರು ನಗರದ ರಸ್ತೆಗಳ ಮೇಲೆ ಅರ್ಧ ಅಡಿಯಷ್ಟು ನೀರು ಹರಿಯುತ್ತಿದೆ. ಮಳೆಯ ಆರ್ಭಟಕ್ಕೆ ವಾಹನ ಸವಾರರು ಪರದಾಡುವಂತಾಯಿತು. ಸದ್ಯ ಮೋಡಕವಿದ ವಾತಾವರಣ ಮುಂದುವರೆದಿದ್ದು ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv