ಯಮನಂತೆ ಧರೆಗುರುಳಿದ ಮರ! ಜನರ ಜೀವ ಉಳಿದಿದ್ದೆ ಹೆಚ್ಚು..ವಿಡಿಯೋ ನೋಡಿ

ಮಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕರಾವಳಿ ತತ್ತರಗೊಂಡಿದೆ. ಈ ನಡುವೆ ನಿನ್ನೆ ಬೀಸಿದ ಬಿರುಗಾಳಿಗೆ ಮಂಗಳದೇವಿ ದೇವಸ್ಥಾನದ ಮುಂಭಾಗದಲ್ಲಿದ್ದ ಅಶ್ವತ್ಥಮರವೊಂದು ಉರುಳಿ ಬಿದ್ದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯದಲ್ಲಿ ಮರ ಜನರ ಮೇಲೆ ಯಮನಂತೆ ಉರುಳಿಬಿಳೋದನ್ನ ಕಾಣಬಹುದು. ಅಕ್ಕಪಕ್ಕದಲ್ಲಿ ನಿಂತಿದ್ದ ಜನ ಮರ ಬೀಳುವ ಸೂಚನೆ ಸಿಗುತ್ತಿದ್ದಂತೆ ಎದ್ನೋಬಿದ್ನೋ ಅಂತಾ ಓಡಿದ್ದಾರೆ. ಆದರೂ ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಸುರೇಖಾ(63), ಪ್ರವೀಣ್ ಸುವರ್ಣ(49), ನವೀನ್(45) ಹಾಗೂ ತೇಜಸ್ವಿನಿ(20) ಎಂಬವರು ಗಾಯಗೊಂಡಿದ್ದಾರೆ.

ಜೂನ್​​ 12ರವರೆಗೂ ಇದೇ ಭಾರೀ ಮಳೆ..!
ರಾಜ್ಯದಲ್ಲಿ ಮುಂಗಾರಿನ ಆರ್ಭಟ ಮುಂದುವರಿದಿದೆ. ಕರಾವಳಿ ಹಾಗೂ ಒಳನಾಡಿನಲ್ಲಿ ಜೂನ್​​ 12ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತಾ ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv