ಕುಂದಗೋಳದಲ್ಲಿ ಆರ್ಭಟಿಸಿದ ವರುಣ

ಧಾರವಾಡ: ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ವರುಣನ ಆರ್ಭಟಿಸಿದ್ದಾನೆ. ಗುಡುಗು ಸಿಡಿಲಿನೊಂದಿಗೆ ಸತತ ಮೂರು ಗಂಟೆ ಸುರಿದ ಭಾರಿ ಮಳೆಯಿಂದ ಶಾಲೆ, ಮನೆ, ಅಂಗಡಿ, ಬಸ್ ನಿಲ್ದಾಣಕ್ಕೆ ಮಳೆ ನೀರು ನುಗ್ಗಿದೆ. ಕುಂದಗೋಳ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಾದ ಅಲ್ಲಾಪೂರ ಹಳಿಯಾಳ, ಕಡಪಟ್ಟಿ ಗ್ರಾಮಗಳಲ್ಲಿ ಮಳೆಯಾಗುತ್ತಿದ್ದು, ಕೆರೆ, ಹಳ್ಳಕೊಳ್ಳಗಳು ಭರ್ತಿಯಾಗಿ ಗ್ರಾಮ ಹಾಗೂ ರಸ್ತೆಗಳಿಗೆ ನೀರು ನುಗ್ಗಿದೆ. ಕುಂದಗೋಳ ತಾಲೂಕಿನ ಇಂಗಳಗಿ-ಬೂದಿಹಾಳ ನಡುವಿನ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಎರಡು ಗ್ರಾಮದ ನಡುವೆ ರಸ್ತೆ ಸಂಚಾರ ಬಂದ್ ಆಗಿದೆ.