ಕೊಪ್ಪಳದಲ್ಲಿ ವರುಣನ ಅಬ್ಬರ: ಜನ ಜೀವನ ಅಸ್ತವ್ಯಸ್ತ

ಕೊಪ್ಪಳ: ರಾಜ್ಯದಾದ್ಯಂತ ವರುಣನ ಅಬ್ಬರ ಜೊರಾಗಿದೆ. ಕೊಪ್ಪಳದಲ್ಲೂ ವರುಣ ಅಬ್ಬರಿಸ್ತಿದ್ದಾನೆ. ಇಂದು ನಗರದಾದ್ಯಂತ ಎರಡು ಗಂಟೆಗೂ ಹೆಚ್ಚುಕಾಲ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಮಳೆರಾಯನ  ಆರ್ಭಟಕ್ಕೆ   ನಗರದ ಮೋರಿಗಳ ನೀರು ರಸ್ತೆ ಮೇಲೆಲ್ಲಾ ಹರಿಯಿತು.ಇನ್ನೂ ಬಸ್ ನಿಲ್ದಾಣ ಸೇರಿದಂತೆ ಮಾರುಕಟ್ಟೆಯ ಅಂಗಡಿ ಮುಂಗಟ್ಟುಗಳಲ್ಲಿ ನೀರು ನಿಂತು ಜನ ಪರದಾಡುವಂತಾಯಿತು. ಅಲ್ಲದೇ ಹಣ್ಣು, ಹೂವು ಮಾರಾಟ ಮಾಡುವ ಸಣ್ಣ ಪುಟ್ಟ ಬೀದಿ ವ್ಯಾಪಾರಸ್ಥರ ವ್ಯಾಪಾರಕ್ಕೆ ಅಡ್ಡಿ ಉಂಟಾಯಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv