ಕೊಪ್ಪಳದಲ್ಲಿ ವರುಣನ ಅಬ್ಬರ: ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ನೀರು..!

ಕೊಪ್ಪಳ: ಮುಂಗಾರಿನ ಆರಂಭದಲ್ಲಿಯೇ ವರುಣ ಅಬ್ಬರಿಸತೊಡಗಿದ್ದಾನೆ. ಇಂದು ವರುಣನ ಅಬ್ಬರಕ್ಕೆ ಗಂಗಾವತಿಯಲ್ಲಿ ಸರ್ಕಾರಿ ಆಸ್ಪತ್ರೆ ಸಂಪೂರ್ಣ ಜಲಾವೃತವಾಗಿತ್ತು. ನಗರದಾದ್ಯಂತ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಿಡಿಲು ಸಮೇತ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಆಸ್ಪತ್ರೆಯೊಳಗೆ ಏಕಾಏಕಿ ನೀರು ನುಗ್ಗಿದ್ದರಿಂದ ರೋಗಿಗಳು ಪರದಾಡಿದ್ರು, ಇನ್ನು ಆಸ್ಪತ್ರೆಯ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸಪಟ್ಟರು. ಕೆಲ ಮನೆಗಳಿಗೂ ನೀರು ನುಗ್ಗಿ ಜನ ವ್ಯಥೆ ಪಡುವಂತಾಯ್ತು. ಇನ್ನು ಮಳೆಯ ಅಬ್ಬರಕ್ಕೆ ಗಂಗಾವತಿ ನಗರದಾದ್ಯಂತ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv