ಗಾಳಿ ಸಹಿತ ಭಾರೀ ಮಳೆಗೆ ಮನೆಗಳು ಜಖಂ

ದಾವಣಗೆರೆ: ಜಿಲ್ಲೆಯಲ್ಲಿ ನಿನ್ನೆ ಸುರಿದ ಗಾಳಿ ಸಹಿತ ಭಾರೀ ಮಳೆಗೆ ಮರಗಳು ಮನೆಗಳ ಮೇಲೆ ಬಿದ್ದಿವೆ. ಪರಿಣಾಮ ಹಲವಾರು ಮನೆಗಳು ಜಖಂ ಆಗಿವೆ. ಹರಪನಹಳ್ಳಿ ಪಟ್ಟಣದ ಉಪ್ಪಾರಗೇರೆ, ಕೊಟ್ಟೂರು ರಸ್ತೆ ಹಾಗೂ ಹುಲಿಕಟ್ಟೆ ರಸ್ತೆಯಲ್ಲಿರುವ ಮನೆಗಳು ಜಖಂ ಆಗಿವೆ. ಮಾಡ್ಲಗೇರೆ ಉಮೇಶ, ಕೆ.ಲಕ್ಕಪ್ಪ ಹಾಗೂ ಕೆ.ಪರಸಪ್ಪ ಎಂಬವರಿಗೆ ಸೇರಿದ ಮನೆಗಳು ಜಖಂ ಆಗಿವೆ.

ಘಟನೆಯಿಂದ ಅದೃಷ್ಟವಶಾತ್​​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚರ್ಚ್ ಆವರಣದಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದ ಪರಿಣಾಮ ಪಟ್ಟಣದಲ್ಲಿ ವಿದ್ಯುತ್ ‌ಸಂಪರ್ಕ ರಾತ್ರಿಯಿಂದಲೇ ಕಡಿತವಾಗಿದೆ. ಜೆಸಿಬಿ ಬಳಸಿ ಬೆಸ್ಕಾಂ ಮತ್ತು ಪುರಸಭೆ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv